ಉಡುಪಿ: ಸಿಎಂ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ವಿಚಾರವಾಗಿ ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ , ವೀಡಿಯೊ ಬಿಡುಗಡೆ ಮಾಡ್ತೀನಿ ಅಂತ ನಾನು ಹೇಳಿಲ್ಲ. ಈಗಾಗಲೇ ಓರ್ವ ಮಾಧ್ಯಮ ಕಾರ್ಯದರ್ಶಿ ರಾಜೀನಾಮೆ ಕೊಟ್ಟಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಅಂದ್ರೆ ರಸ್ತೇಲಿ ಹೋಗೋರಲ್ಲ.ಸಾಮಾನ್ಯ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿಬರುತ್ತಿದೆ. ಅವರ ಎಲ್ಲ ವ್ಯವಹಾರಗಳು ನಮಗೆ ಗೊತ್ತಿಲ್ಲದೇ ಏನಿಲ್ಲ. ಸರ್ಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ. ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ ಎಂದರು.
ಸಂಸಾರದಲ್ಲಿ ಯಾವುದೇ ಬಿರುಕಿರಲಿಲ್ಲ ಎಂದು ಈಗಾಗಲೇ ಸಂತೋಷ್ ಪತ್ನಿ ಹೇಳಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದಾರೆ. ಇವನ್ನೆಲ್ಲ ನೋಡಿಕೊಂಡು ಪ್ರತಿಪಕ್ಷದ ಅಧ್ಯಕ್ಷನಾಗಿದ್ದು ಕಣ್ಣುಮುಚ್ಚಿ ಕೂರೋಕಾಗುತ್ತಾ? ರಾಜ್ಯದ ಜನತೆಗೆ ತಿಳಿಸೋದು ನನ್ನ ಜವಾಬ್ದಾರಿ. ಗೃಹ ಸಚಿವರು ತನಿಖೆ ಮಾಡ್ತೇನೆ ಅಂದಿದ್ದಾರೆ.
ಸಿ.ಡಿ. ಇತ್ತೋ ಇಲ್ವೋ, ರೆಕಾರ್ಡ್ ಇತ್ತೋ ಇಲ್ವೋ ಎಲ್ಲ ಹೊರಬರಲಿ. ಆತನಿಗೆ ಸಣ್ಣ ವಯಸ್ಸಲ್ಲಿಯೇ ಉನ್ನತ ಸ್ಥಾನಮಾನ ಸಿಕ್ಕಿತ್ತು.
ಈ ವಯಸ್ಸಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಯತ್ನ ಮಾಡ್ಕೊಳಲ್ಲ. ಅಧಿಕಾರಕ್ಕೆ ತೊಂದರೆ ಆಗಿರಬೇಕು, ಹೆಸರಿಗೆ ಕುಂದು ಬಂದಿರಬಹುದು.
ಏನು ವ್ಯವಹಾರ, ಏನು ರಾಜಕಾರಣ ಎಂಬುದನ್ನು ಜನರಿಗೆ ತಿಳಿಸಿ ಎಂದರು. ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ತಾ ಇದ್ದಾರೆ ಎಂದ ಡಿಕೆಶಿ, ನಾನೇನೂ ಈಶ್ವರಪ್ಪ ಸುದ್ದಿ ಮಾತಾಡಿಲ್ಲ. ಯಾರ್ಯಾರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ನಮಗೂ ಗೊತ್ತು.ನಮಗೆ ಅವಶ್ಯಕತೆ ಇಲ್ಲದ ವಿಚಾರ ಅಂತ ಸುಮ್ನಿದ್ದೇವೆ ಎಂದರು.
Kshetra Samachara
29/11/2020 02:25 pm