ಬಂಟ್ವಾಳ: ಸುಮಾರು 188 ಅಡಿ ಎತ್ತರದಲ್ಲಿ ಕ್ರೇನ್ ನಲ್ಲಿ ಹಾರಾಡಿದ ಬಿಜೆಪಿ ಧ್ವಜ, ಬ್ರಹ್ಮಶ್ರೀ ನಾರಾಯಣಗುರು ವೃತ್ತ ಸಹಿತ ಬಿ.ಸಿ.ರೋಡ್ ನೇತ್ರಾವತಿ ಸೇತುವೆ, ಫ್ಲೈಓವರ್ ಗಳಲ್ಲಿಡೀ ಧ್ವಜ ಹಾರಾಟ, ಫ್ಲೆಕ್ಸ್, ಕಟೌಟ್ ಬ್ಯಾನರ್ ಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆಗಳಲ್ಲಿ ನಡೆಯುವ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಒಂದಾದ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಸಹಿತ ಪಕ್ಷದ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ತಾಲೂಕು ಮಟ್ಟದ ನಾಯಕರು ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ ಡಿಸಿಎಂ ಅಶ್ವತ್ಥ ನಾರಾಯಣ, ಸಂಸದೆ ಶೋಭಾ ಕರಂದ್ಲಾಜೆ, ಪ್ರಮುಖರಾದ ಮುನಿಸ್ವಾಮಿ, ಮಹೇಶ್ ಟೆಂಗಿನಕಾಯಿ ಅವರನ್ನು ಮೆರವಣಿಗೆಯಲ್ಲಿ ನಾರಾಯಣಗುರು ವೃತ್ತದಿಂದ ಸ್ಪರ್ಶ ಕಲಾ ಮಂದಿರದವರೆಗೆ ಕರೆದೊಯ್ದರು.
Kshetra Samachara
28/11/2020 04:32 pm