ಉಡುಪಿ : ಉಡುಪಿಯ ಕೋಟೇಶ್ವರದ ಗ್ರಾಮಸ್ವರಾಜ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಸಾಮಾನ್ಯ ಕಾರ್ಯಕರ್ತ ನಾಯಕನಾಗುವುದೆ ಪಂಚಾಯತ್ ಚುನಾವಣೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಸಾಧನೆ, ವಿಚಾರಧಾರೆಯ ಪರಿಶ್ರಮದ ಮೂಲಕ ಗೆಲುವು ಸಾಧಿಸುವುದು ಈ ಗ್ರಾಮ ಸ್ವರಾಜ್ಯ ಯಾತ್ರೆ.ರಾಮರಾಜ್ಯ ಮಹತ್ಮಾ ಗಾಂಧಿಯವರ ಕನಸು. ದೆಹಲಿ, ಮುಂಬಯಿ ಬೆಳೆದರೆ ರಾಮರಾಜ್ಯವಾಗದು. ಹಳ್ಳಿಗಳಲ್ಲಿಯೂ ಸ್ವರಾಜ್ಯದ ಕಲ್ಪನೆಯ ಬೆಳೆಯಬೇಕು ಎನ್ನುವುದು ಗಾಂಧಿಯವರ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರ, ಕುಟುಂಬ ರಾಜಕೀಯ ಲಾಲಸೆಯಿಂದಲೇ ಮುಂದುವರಿಯಿತು. ಇದೀಗ ಕೇಂದ್ರದಲ್ಲಿ ಮೋದಿಜಿ ನೇತೃತ್ವದ ಸರ್ಕಾರ ಗಾಂಧಿ ಕಂಡ ಸ್ವರಾಜ್ಯದ ಕಲ್ಪನೆ ನನಸು ಮಾಡುತ್ತಿದೆ ಎಂದರು.
ಇವತ್ತು ಜಗತ್ತೇ ಭಾರತದ ಕಡೆ ನೋಡುತ್ತಿದೆ. ಜಗತ್ತಿನಲ್ಲಿ ಭಾರತ ನಿರ್ಮಾಣ ಸಂಕಲ್ಪ ಈಡೇರಿದೆ. ಭ್ರಷ್ಟಚಾರದ ಕಳಂಕವಿಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಆರುವರೆ ವರ್ಷ ಆಡಳಿತ ನೀಡುತ್ತಿದ್ದಾರೆ. ಪರಿವರ್ತನೆಗಳು ದೇಶದಲ್ಲಿ ಆಗುತ್ತಿದೆ. ಪಂಚಾಯತಿ ವ್ಯವಸ್ಥೆಗೆ ಬಲ ನೀಡುವ, ಅಧಿಕಾರ ನೀಡುವ ಕೆಲಸ ಆಗುತ್ತಿದೆ. ಪ್ರತಿ ಪಂಚಾಯತಿಗೆ 25 ಮನೆ, ಹಕ್ಕು ಪತ್ರಗಳನ್ನು ನೀಡುವ ಕೆಲಸ ಆಗುತ್ತಿದೆ. ಕರಾವಳಿಗೆ ವಿಶೇಷವಾದ ಮರಳು ನೀತಿ ತರಬೇಕು ಎನ್ನುವುದು ಡಾ|ವಿ.ಎಸ್.ಆಚಾರ್ಯರ ಕನಸಾಗಿತ್ತು. ಖಂಡಿತ ಅದನ್ನು ನಾವು ಈಡೇರಿಸುತ್ತೇವೆ ಎಂದರು.
Kshetra Samachara
27/11/2020 05:43 pm