ಉಡುಪಿ : ಅಧಿಕಾರ ಮದದಿಂದ ಮುಗ್ದ ಮಹಿಳೆಯರ ಸ್ವಾವಲಂಬಿ ಬದುಕಿನ ಮೇಲೆ ಗದಾಪ್ರಹಾರ ಮಾಡುವುದು ಖಂಡನಾರ್ಹ, ಈ ದೇಶ ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಿದೆ. ಅಸಂಖ್ಯ ಮಹಿಳಾ ಸಾಧಕರು ನಿತ್ಯಸ್ಮರಣೀಯರಾಗಿದ್ದಾರೆ. ಆದರೆ ಇವತ್ತು ಸ್ವಾವಲಂಬನೆಯ ಮೂಲಕ ಜೀವನ ರೂಪಿಸಿಕೊಳ್ಳುತ್ತಿರುವ ಮಹಿಳೆಯರಿಗೆ ಅನಗತ್ಯ ತೊಂದರೆ ನೀಡುವ ಮೂಲಕ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿರುವುದು ದುರಂತ. ಮಹಿಳೆಯರ ಸ್ವಾವಲಂಬನಾ ಕೇಂದ್ರದ ದಮನದ ವಿರುದ್ಧ ಜಿಲ್ಲಾ ಪಂಚಾಯತಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ದಿನ ದೂರವಿಲ್ಲ ಎಂದು ಮಾಜಿ ಸಂಸದ ವಿನಯ ಕುಮಾರ ಸೊರಕೆ ಹೇಳಿದರು.
ಅವರು, ವಂಡ್ಸೆ ಎಸ್.ಎಲ್.ಆರ್.ಎಂ ಅಧೀನ ಸಂಸ್ಥೆಯಾದ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ತೆರವು ಮಾಡಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಆಶ್ರಯದಲ್ಲಿ ಬೈಂದೂರಿನಲ್ಲಿ ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
Kshetra Samachara
06/11/2020 05:37 pm