ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗ್ರಾಪಂ ಚುನಾವಣೆಗೆ ಓಟು ಹಾಕಲು ಮತಪೆಟ್ಟಿಗೆಗಳಿಗೆ ಹೊಳಪು

ಬಂಟ್ವಾಳ: ಗ್ರಾಮ ಸರಕಾರ ರಚನೆಗೆ ಹಳ್ಳಿ ಸಮರಕ್ಕೆ ಒಂದೆಡೆ ರಾಜಕೀಯ ಪಕ್ಷಗಳು ಪೈಪೋಟಿಯೊಂದಿಗೆ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಯಾವುದೇ ಕ್ಷಣ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವ ಕಾರಣ ಆಡಳಿತವೂ ಚುನಾವಣೆ ನಡೆಸಲು ಸಜ್ಜಾಗುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಹಲವು ಮಾರ್ಗಸೂಚಿಗಳು ಈ ಚುನಾವಣೆಯಲ್ಲಿ ಪಾಲನೆಯಾಗುತ್ತಿರುವುದು ವಿಶೇಷ. ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಮತಪೆಟ್ಟಿಗೆಗಳಿಗೆ ಬಣ್ಣ ಬಳಿದು ಹೊಳಪು ನೀಡಲಾಗುತ್ತಿದೆ.

ಈಗಾಗಲೇ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ 396 ಬ್ಯಾಲೆಟ್ ಬಾಕ್ಸ್ ಗಳನ್ನು ಸಿದ್ಧಗೊಳಿಸಲಾಗುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ನಿರ್ವಹಣೆಯೂ ದೊಡ್ಡ ಸವಾಲು.

ಬೂತ್ ಒಂದಕ್ಕೆ ಮತದಾರರ ಸಂಖ್ಯೆ 1 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಆರೋಗ್ಯ ನೋಡಲ್ ಅಕಾರಿಯನ್ನು ನೇಮಿಸಲಾಗುತ್ತದೆ. ಮತದಾರರಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ನಿಗದಿತ ತಾಪಮಾನಕ್ಕಿಂತ ಹೆಚ್ಚಿದ್ದಲ್ಲಿ ಆ ಮತದಾರರನ್ನು ಎರಡುಬಾರಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು, ಅಗಲೂ ಮೊದಲ ತಾಪಮಾನವಿದ್ದರೆ ಅಂತಹ ಮತದಾರನಿಗೆ ಟೋಕನ್ ನೀಡಿ ಮತದಾನದ ಅಂತ್ಯದ ವೇಳೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಆಗ ಕೋವಿಡ್ ಸಂಬಂಸಿದ ಸುರಕ್ಷತಾಕ್ರಮವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಹಾಗೆಯೇ 80 ವರ್ಷ ಮೇಲ್ಪಟ್ಟವರು, ಕೋವಿಡ್ ಸೋಂಕು ಶಂಕಿತ, ಹೋಂ,ಇನ್ಸ್ಟಿಟ್ಯೂಷನ್ ನಲ್ಲಿರುವ ಮತದಾರರಿಗೆ ಅಂಚೆ ಮೂಲಕ ಮತದಾನದ ಅವಕಾಶ ಇರುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 58 ಗ್ರಾಪಂಗಳಿದ್ದು,ಈ ಪೈಕಿ ಪುದು ಗ್ರಾಪಂ ಹೊರತು ಪಡಿಸಿ 57 ಗ್ರಾಪಂ ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ಪುದು ಪಂಚಾಯತ್ ನ ಚುನಾಯಿತ ಪ್ರತಿನಿಗಳ ಅವ ಇನ್ನು ಕೂಡ ಮುಗಿಯದಿರುವ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಬಂಟ್ವಾಳ ತಾಲೂಕಾಡಳಿತದ ಚುನಾವಣಾ ಶಾಖಾ ವಿಭಾಗ ಈ ನಿಟ್ಟಿನಲ್ಲಿ ತಯಾರಿಯಲ್ಲಿ ನಿರತವಾಗಿದೆ. ಎಂದು ಬಂಟ್ವಾಳ ಚುನಾವಣಾ ಶಾಖೆಯ ಉಪತಹಸೀಲ್ದಾರ್ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

15/10/2020 05:44 pm

Cinque Terre

15.08 K

Cinque Terre

0

ಸಂಬಂಧಿತ ಸುದ್ದಿ