ಉಡುಪಿ: ಉಡುಪಿಯ ಹೋಟೆಲ್ ಮಥುರಾ ಕಂಫರ್ಟ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಉಡುಪಿ ಜಿಲ್ಲಾ ವತಿಯಿಂದ ರಾಜ್ಯಾಧ್ಯಕ್ಷರಾದ ಡಾ. ರವಿ ಶೆಟ್ಟಿ ಬೈಂದೂರ್ ಅನುಮತಿ ಮೇರೆಗೆ ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯ SWIFGGY (ಸ್ವಿಗ್ಗಿ ) ಕಾರ್ಮಿಕರ ಅವಹಾಲು ಕಾರ್ಯಕ್ರಮ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಿತು.ಸಭೆಯಲ್ಲಿ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಲಾಯಿತು.
ಈ ಸಂದರ್ಭ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿ, ಜಿಲ್ಲಾ ಕಾರ್ಮಿಕ ವಿಭಾಗ ಜಿಲ್ಲಾಧ್ಯಕ್ಷರಾದ ಮೋಹನ್ ಕಲ್ಮಾಡಿ, ಮಹಿಳಾ ಜಿಲ್ಲಾಧ್ಯಕ್ಷರಾದ ಮಮತಾ ಅಮೀನ್, ಜಿಲ್ಲಾ ಕಾರ್ಯದರ್ಶಿ ಮಹಿಳಾ ವಿಭಾಗ ರೇಷ್ಮ, ಜಿಲ್ಲಾ ಕಾರ್ಯದರ್ಶಿ ಮಹಿಳಾ ವಿಭಾಗ ಸುಷ್ಮಿತಾ ಡಿಸೋಜ, ಜಿಲ್ಲಾ ಕಾರ್ಯದರ್ಶಿ ಸುಧಾಕರ್ ಎಂ. ಬಂಗೇರ, ಜಿಲ್ಲಾ ಕಾರ್ಯದರ್ಶಿ ಎಲ್ಲಪ್ಪ ಗೌಡ, ಕಾರ್ಯದರ್ಶಿ ಚಿನ್ನ ಬೆಳ್ಳಿ ವಿಭಾಗ ರಾಘವೇಂದ್ರ ಶೇಟ್, ಡ್ಯಾನಿ, ಸಂದೀಪ್, ಶಿವ ಪುತ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
20/10/2021 09:13 pm