ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ ಸುದೃಢ ಕುಟುಂಬ ಸುಭದ್ರ ಸಮಾಜ ರಾಷ್ಟ್ರೀಯ ಅಭಿಯಾನವು ಫೆ.19-28ರವರೆಗೆ ರಾಷ್ಟ್ರಾದ್ಯಂತ ನಡೆಯಲಿದೆ.
ಈ ಮೂಲಕ ಕಾರ್ಯಕ್ರಮವನ್ನು ಆಯಾ ಊರಿನ ನಿರ್ದಿಷ್ಟ ಸ್ಥಳದಲ್ಲಿ ಆಯೋಸಿಸಲು ನಿರ್ಧರಿಸಲಾಗಿದೆ. ಈ ಅಭಿಯಾನದ ಮೂಲಕ ಕುಟುಂಬದ ಮೂಲಸ್ಥಿತಿಯನ್ನು ಕಾಪಾಡಲು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡುವ ಉದ್ದೇಶದಿಂದ ತಳಮಟ್ಟದಿಂದಲೇ ಆತ್ಮಾವಲೋಕನ ಮಾಡಲು ಹೆಚ್ಚಿನ ಒತ್ತು ಕೊಡುವ ರೂಪದಲ್ಲಿದೆ ಎಂದು ಅಭಿಯಾನದ ಬಗ್ಗೆ ಅನುಪಮಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಮಾಹಿತಿ ನೀಡಿದರು.
ಈ ಅಭಿಯಾನದಲ್ಲಿ ಕಾರ್ನರ್ ಮೀಟಿಂಗ್, ಕುಟುಂಬ ಸಭೆಗಳು, ಸ್ಪರ್ಧೆಗಳು, ಫ್ಯಾಮಿಲಿ ಕ್ವಿಝ್, ಅಂತರ್ಧರ್ಮೀಯ ಸಂವಾದ, ಅಂತಾರಾಷ್ಟ್ರೀಯ ವೆಬಿನಾರ್, ಆಪ್ತಸಲಹೆ, ಚಾವಡಿ ಚರ್ಚೆ, ಜುಮಾ ಕುತ್ಬಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಬೀಹಾ ಫಾತಿಮಾ ಹೇಳಿದರು.
Kshetra Samachara
18/02/2021 12:54 pm