ಬೈಂದೂರು: ಧರ್ಮೇಗೌಡ ರಂಥ ಸೂಕ್ಷ್ಮ ವ್ಯಕ್ತಿತ್ವದ ವ್ಯಕ್ತಿಗಳು ಸಿಗುವುದು ಬಹಳ ಕಷ್ಟ. ಎಸ್ ಎಲ್ ಬೋಜೇಗೌಡ ರ ಅಣ್ಣನಾದ ಧರ್ಮೇಗೌಡರು ನನಗೆ ಬಹಳಷ್ಟು ಹತ್ತಿರದ ವ್ಯಕ್ತಿ ಎಂದರೆ ತಪ್ಪಾಗಲಾರದು.
ಒಂದು ವಿಷಯ ನೆನಪಿಸಿಕೊಳ್ಳ ಬೇಕೆಂದರೆ. ದೇವಸ್ಥಾನ ಪೂಜೆಗೆ ಅವರೊಂದಿಗೆ ನಾನು ಕೂಡ ಹೋಗಿದ್ದೆ ಅವರ ಸರಳ ವ್ಯಕ್ತಿತ್ವ ನೋಡಿ ತಲೆದೂಗದವರಿಲ್ಲ ಒಟ್ಟಿಗೆ ಪೂಜೆ ,
ಒಟ್ಟಿಗೆ ಊಟ ಮಾಡಿದ ಸ್ನೇಹಜೀವಿ ಸಾವಿರ ಸಜ್ಜನಿಕೆಯ ಅಂತಹ ವ್ಯಕ್ತಿಯನ್ನು ಕಳೆದುಕೊಂಡ ನನಗೆ ನೋವು ಬಹಳಷ್ಟು ಕಾಡುತ್ತಿದೆ.
ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿ.. ಮಾತನಾಡಿದ ಶೆಟ್ಟಿ
ಮೊನ್ನೆ ವಿಧಾನಪರಿಷತ್ ದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅಭಿಪ್ರಾಯಕ್ಕೆ.
ವಿಧಾನಸೌಧ ಮತ್ತು ವಿಧಾನಪರಿಷತ್ ಜನರ ಕಷ್ಟಗಳನ್ನು ನಾಡಿನ ಜ್ವಾಲಾಅಂತ ಸಮಸ್ಯೆಯನ್ನು ಆರೋಗ್ಯಕರವಾಗಿ ಚರ್ಚಿಸಬೇಕಾದ
ಈ ಎರಡು ಕ್ಷೇತ್ರಗಳಲ್ಲಿ ಇಂದು ಕೆಲವು ಭ್ರಷ್ಟ ರಾಜಕಾರಣಿಗಳು ಪ್ರಚಾರಕ್ಕೆ ಬಳಸಿ ಕೊಳ್ಳುತ್ತಿರುವುದು ಸಾಕಷ್ಟು ಬೇಸರವನ್ನುಂಟು ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಯಂ ಆಗಿದೆ.
ದೇವಸ್ಥಾನಕ್ಕೆ ಸಮನಾದ ಸದನಗಳಲ್ಲಿ ಅಂಗಿ ಹರಿದುಕೊಂಡು ಪೀಠೋಪಕರಣ ಧ್ವಂಸಗೊಳಿಸಿ, ಎಳೆದಾಡಿ, ಹೊಡೆದಾಡಿ, ಗಲ್ಲಿ ರೌಡಿಗಳಂತೆ ವರ್ತಿಸುವ ಕೆಲವು ಭ್ರಷ್ಟ ರೌಡಿ ರಾಜಕಾರಣಿಗಳು ಇರುವವರೆಗೆ ಆಸ್ಥಾನಕ್ಕೆ ಗೌರವ ಇಲ್ಲ ನಾಡಿನ ಜನತೆಗೆ ನ್ಯಾಯ ದೊರಕುವುದಿಲ್ಲ...
ಇತ್ತೀಚಿನ ರಾಜಕೀಯ ವ್ಯವಸ್ಥೆ ತುಂಬಾ ಬೇಸರ ಮೂಡಿಸುವಂತಿದೆ. ನಾವು ಈಗ ಒಬ್ಬ ಹಿರಿಯ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ.
ಇದರಿಂದ ನಾಡಿಗೆ ಮತ್ತು ಪಕ್ಷಕ್ಕೆ ಬಹಳ ನಷ್ಟವಾಗಿದ್ದು ಇನ್ನಾದರೂ ಸದನಗಳ ಗೌರವ ಉಳಿಸುವುದಕ್ಕೆ ಕೆಲಸ ಆಗಲಿ . ಹಾಗೆಯೇ ಎಸ್ಎಲ್ ಭೋಜೆಗೌಡ ರ ಸಾವಿನ ಸತ್ಯ ಸತ್ಯ ಹೊರಬರಲಿ
ಅವರ ಕುಟುಂಬಕ್ಕೆ ಅವರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರಿದರು..
Kshetra Samachara
29/12/2020 10:12 am