ಕೋಟ: ಜನವರಿ 1 ರಿಂದ ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯ ಕುರಿತಂತೆ ಸಾಸ್ತಾನ ಟೋಲ್ ನಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ವತಿಯಿಂದ ಟೋಲ್ ಮುಖ್ಯಸ್ಥರಲ್ಲಿ ಮಾಹಿತಿ ಪಡೆಯಲು ಮುತ್ತಿಗೆ ಹಾಕಲಾಯಿತು.
ಫಾಸ್ಟ್ ಟ್ಯಾಗ್ ಕಡ್ಡಾಯದ ಬಗ್ಗೆ ಸ್ಥಳೀಯರಿಗೆ ರಿಯಾಯಿತಿ ನೀಡಬೇಕು, ಹಿಂದೆ ಇದ್ದ ವ್ಯವಸ್ಥೆಯಂತೆ ಕೋಟ ಜಿಪಂ ವ್ಯಾಪ್ತಿಯ ವಾಹನಗಳಿಗೆ ಟೋಲ್ ರಿಯಾಯಿತಿಯಂತೆ ಒಂದು ಗೇಟ್ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಟೋಲ್ ಮಾನ್ಯೇಜರ್ ಬಷೀರ್ ಮಾತನಾಡಿ, ಜನವರಿ 1ರಿಂದ ಎಲ್ಲರೂ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಮೂಲಕ ಸಂಚರಿಸಬೇಕು ಎಂಬ ಮಾಹಿತಿ ನಮ್ಮ ಮೇಲಾಧಿಕಾರಿ ನೀಡಿದ್ದಾರೆ ಎಂದರು.
ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ ಹೆದ್ದಾರಿ ಸಮಿತಿ ಪದಾಧಿಕಾರಿಗಳು, ಟೋಲ್ ರಿಯಾಯಿತಿ ಕುರಿತಂತೆ ಹಿಂದೆ ರೂಪಿಸಿದ ಹೋರಾಟ ಮರಳಿ ವ್ಯಕ್ತಪಡಿಸಬೇಕಾದೀತು.
ಸಂಸದೆ ಶೋಭಾ ಕರಂದ್ಲಾಜೆ ಸ್ಥಳೀಯರಿಗೆ ಟೋಲ್ ರಿಯಾಯಿತಿಗೆ ಜಿಲ್ಲಾಧಿಕಾರಿ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಅದೇ ರೀತಿ ಮುಂದೆಯೂ ವ್ಯವಸ್ಥೆ ಕಲ್ಪಿಸಿ.
ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದರು. ಇದಕ್ಕೆ ಉತ್ತರಿಸಿದ ಬಷೀರ್, ನಾಳೆ ವರೆಗೆ ಸಮಯ ನೀಡಿ, ಸಮರ್ಪಕ ಮಾಹಿತಿ ನೀಡುತ್ತೇನೆ ಎಂದರು.
Kshetra Samachara
28/12/2020 10:40 am