ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉತ್ತರಾಖಂಡ ಹಿಮಪಾತ ದುರಂತ; ಪೇಜಾವರ ಶ್ರೀ ಕಳವಳ

ಉಡುಪಿ: ಉತ್ತರಾಖಂಡದಲ್ಲಿ ಭಾನುವಾರ ಭೀಕರ ಹಿಮಪಾತ ಸಂಭವಿಸಿ ಕೆಲವರು ಮೃತಪಟ್ಟು, ಹಲವು ಮಂದಿ ಕೊಚ್ಚಿ ಹೋಗಿ ಕಣ್ಮರೆಯಾಗಿರುವ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪ್ರಾಕೃತಿಕ ದುರ್ಘಟನೆಯಿಂದ ತೀವ್ರ ಬೇಸರವಾಗಿದೆ. ದುರಂತದಿಂದಾಗಿ ಸಂತ್ರಸ್ತರಾಗಿರುವವರ ನೋವಿಗೆ ನಮ್ಮ ಸಹಾನುಭೂತಿ ಇದೆ. ಉತ್ತರಾಖಂಡ ರಾಜ್ಯದ ಸಮಸ್ತ ಜನತೆಯ ಶ್ರೇಯಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

ಘಟನೆಯಿಂದ ಮೃತರಾಗಿರುವವರಿಗೆ ದೇವರು ಸದ್ಗತಿಯನ್ನು ಕರುಣಿಸಲಿ. ನಾಪತ್ತೆಯಾಗಿರುವವರು ಶೀಘ್ರವಾಗಿ ಯಾವುದೇ ಅಪಾಯವಿಲ್ಲದೆ ಪತ್ತೆಯಾಗಲೆಂದು ಆಶಿಸುತ್ತೇವೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

08/02/2021 10:06 am

Cinque Terre

16.88 K

Cinque Terre

0

ಸಂಬಂಧಿತ ಸುದ್ದಿ