ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನಲ್ಲಿ ಸೆ.26 ರಿಂದ ಅ.9ರ ತನಕ ವಿಶ್ವ‌ ವಜ್ರ : ವಜ್ರಾಭರಣಗಳ‌ ಪ್ರದರ್ಶನ ಮತ್ತು ಮಾರಾಟ

ಉಡುಪಿ: ನಗರದ ಪ್ರಸಿದ್ಧ ಚಿನ್ನ ಮತ್ತು ವಜ್ರದ ಮಳಿಗೆ

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನಲ್ಲಿ ಸೆ.26 ರಿಂದ ಅ.9ರ ತನಕ ನಡೆಯುವ ವಿಶ್ವ‌ ವಜ್ರ: ವಜ್ರಾಭರಣಗಳ‌ ಪ್ರದರ್ಶನ ಮತ್ತು ಮಾರಾಟಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಕೋಟ ಜನತಾ ಫಿಶ್‌ಮೀಲ್ ಮತ್ತು ಆಯಿಲ್ ಪ್ರೊಡಕ್ಟ್ ಇದರ ಆಡಳಿತ ಪಾಲುದಾರ ಆನಂದ್ ಸಿ.ಕುಂದರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿರುವ ಸುಲ್ತಾನ್ ಸಂಸ್ಥೆಯಲ್ಲಿ ವಿದೇಶದಲ್ಲಿ ಸಿಗುವ ಗುಣಮಟ್ಟದ ಚಿನ್ನಾಭರಣ, ಸಂಗ್ರಹ ಲಭ್ಯವಿದೆ. ಜನಪರ ಕಾರ್ಯ ನಡೆಸುತ್ತಿರುವ‌ ಸಂಸ್ಥೆ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.

ಇಟಾಲಿಯನ್ ಸಂಗ್ರಹವನ್ನು ಉದ್ಯಮಿ ಸಾಧು ಸಾಲಿಯಾನ್, ಸಿಂಗಾಪುರ ಸಂಗ್ರಹವನ್ನು ತೋಳಾರ್ ಓಷಿಯನ್ ಪ್ರೊಡಕ್ಟ್ ಪ್ರೈ.ಲಿ.ಇದರ ಆಡಳಿತ ನಿರ್ದೇಶಕ ಡಾ.ಪ್ರಕಾಶ್ ಸಿ.ತೋಲಾರ್, ಬೆಲ್ಜಿಯಂ ಸಂಗ್ರಹವನ್ನು ಮಲ್ಪೆ ಜಾಮಿಯಾ ಮಸೀದಿ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಫ್ರೆಂಚ್ ಸಂಗ್ರಹವನ್ನು ನಾವುಂದ ಮತ್ಸೋದ್ಯಮಿ ಬಶೀರ್ ತೌಫೀಕ್, ಸಾಲಿಟರಿ ಸಂಗ್ರಹವನ್ನು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ,ಕೈಯಾ‌ ಲೈಟ್ ವೆಯಿಟ್ ಸಂಗ್ರಹವನ್ನು ಸನ್‌ಶೈನ್ ಟ್ರಾವೆಲ್ಸ್‌ನ ಸ್ಥಾಪಕಿ ಸರಿತಾ ಸಂತೋಷ್ ಹಾಗೂ ತನ್ಮನಿಯಾ ಸಂಗ್ರಹವನ್ನು ಯಾಸ್ಮಿನ್ ತೋಟ ಅನಾವರಣಗೊಳಿಸಿದರು.

ಪ್ರದರ್ಶನದ ಮೊದಲ ಖರೀದಿಯನ್ನು ಗ್ರಾಹಕರಾದ ತಕ್ಷತ್‌ ಶೆಟ್ಟಿ ರಕ್ಷತ್ ಶೆಟ್ಟಿ ಹಾಗೂ ಜ್ಯೋತಿ ಮಾಡಿದರು. ಸುಲ್ತಾನ್ ಸಂಸ್ಥೆಯ ಜನರಲ್ ಮೆನೇಜರ್ ಎ.ಕೆ.ಉನ್ನಿತ್ತನ್, ಪ್ರಾದೇಶಿಕ ಮೆನೇಜರ್ ಸುಮೇಶ್, ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್, ಕಾರ್ಪೊರೆಟ್ ಡೈಮಂಡ್ ಮೆನೇಜರ್ ಅರುಣ್, ಸೇಲ್ಸ್ ಮೆನೇಜರ್ ಇಲಿಯಾಸ್, ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್‌ನ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ ಮೆನೇಜರ್ ಮುಹಮ್ಮದ್ ಶಾಮೀಲ್ ಖಾದರ್ ಉಪಸ್ಥಿತರಿದ್ದರು. ಸಾಹೀಲ್ ಝಾಹೀರ್ ಸ್ವಾಗತಿಸಿ, ನಿರೂಪಿಸಿದರು.

ಇಟಲಿ, ಫ್ರಾನ್ಸ್, ಟರ್ಕಿ, ಯುಎಸ್, ಸಿಂಗಾಪುರ್ ಮತ್ತು ಮಧ್ಯ ಪ್ರಾಚ್ಯದ ವಿಶೇಷ ಅಂತಾರಾಷ್ಟ್ರೀಯ ಸಂಗ್ರಹಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ. ಪ್ರದರ್ಶನದಲ್ಲಿ ಡೈಮಂಡಿನ ಪ್ರತಿ ಕ್ಯಾರೆಟ್ ಮೇಲೆ 8000ರೂ. ರಿಯಾಯಿತಿಯಿದೆ.

Edited By : Somashekar
PublicNext

PublicNext

27/09/2022 08:10 pm

Cinque Terre

28.44 K

Cinque Terre

2