ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಲಾಸ್ಟಿಕ್ ಮುಕ್ತ ಪೂಪಾಡಿ ಕಲ್ಲು

ಉಳ್ಳಾಲ: ಅ.1ಗಾಂಧಿ ಜಯಂತಿ ಪ್ರಯುಕ್ತ ಕೈರಂಗಳ ,ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಪೂಪಾಡಿ ಕಲ್ಲಿನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಿದರು.ಪೂಪಾಡಿ ಕಲ್ಲು ಜಂಕ್ಷನ್ ನಲ್ಲಿ ವಿದ್ಯಾ ಕೇಂದ್ರದ ಶಿಕ್ಷಕರು ,ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಜೊತೆ ಸೇರಿ ಪರಿಸರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಗಳನ್ನ ಹೆಕ್ಕಿ ಸ್ವಚ್ಛಗೊಳಿಸಿದರು.

ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಮಹಾತ್ಮ‌ ಗಾಂಧಿ ಅವರು ಅನೇಕ ವರುಷಗಳ ಹಿಂದೆನೆ ಸ್ವಚ್ಛ ಭಾರತದ ಪರಿಕಲ್ಪನೆಯನ್ನ ಪರಿಚಯಿಸಿದ್ದರು.ಇದೀಗ ದೇಶದ ಪ್ರದಾನಿ ನರೇಂದ್ರ ಮೋದಿಯವರು ಸ್ವಚ್ಛತೆಯನ್ನ ಭಾರತದಲ್ಲಿ ಆಂದೋಲನವನ್ನಾಗಿಸಿದ್ದು ಅದಕ್ಕೆ ಪೂರಕವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳು ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಸಿರುವುದಾಗಿ ಹೇಳಿದರು.

Edited By : PublicNext Desk
Kshetra Samachara

Kshetra Samachara

01/10/2022 12:57 pm

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ