ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವವು ಸೋಮವಾರ(ನಾಳೆ)ದಿಂದ ಆರಂಭಗೊಂಡು ಆ.5 ರ ವರೆಗೆ ಜರುಗಲಿದೆ .ನಾಳೆ ಬೆಳಿಗ್ಗೆ 9:30 ರಿಂದ ಕಟೀಲು ದೇವಸ್ಥಾನದ ಬಳಿಯ ಸರಸ್ವತೀ ಸದನದಲ್ಲಿ ದುರ್ಗಾ ಭಜನಾ ಮಂಡಳಿ ಮಿಜಾರು,ಬಾಲ ವಿಠೋಬಾ ಭಜನಾ ಮಂಡಳಿ ಪಲ್ಲಿಪಾಡಿ,ನವಜ್ಯೋತಿ ಮಹಿಳಾ ಮಂಡಳಿ ಕೊಯಿಕುಡೆ ಪಂಜ,ಮಹಿಳಾ ಮಂಡಳಿ ಶಿಬರೂರು ಹಾಗೂ ಮಾತೃ ಸಂಘ ಬಿಜಾಡಿ ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ.ಸಂಜೆ 5:30 ರಿಂದ ಶ್ರೀ ಮತಿ ವಂದನಾ ಮೂರ್ತಿ 'ಹಂಸನಾದ ' ಬೆಂಗಳೂರು ಇವರಿಂದ ಸುಗಮ/ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ಸಂಜೆ 7:30 ರಿಂದ 'ಪೃಥುಯಜ್ಙ' ಯಕ್ಷಗಾನ ಬಯಲಾಟ ನಡೆಯಲಿದೆ.
Kshetra Samachara
25/09/2022 08:19 pm