ಬಜಪೆ: ಸ್ವಚ್ಛತಾ ಆಂದೋಲನದ ಪ್ರಯುಕ್ತ ಬಜಪೆ ಪಟ್ಟಣ ಪಂಚಾಯತ್ ವತಿಯಿಂದ ಬಜಪೆ ಪರಿಸರದಲ್ಲಿ ಇಂದು ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ನಡೆಯಿತು.
ಸ್ವಚ್ಛತಾ ಆಂದೋಲನವು ಇಂದು ಬೆಳಗ್ಗಿನಿಂದಲೇ ಆರಂಭಗೊಂಡಿದ್ದು, ಮಧ್ಯಾಹ್ನದ ತನಕ ನಡೆಯಿತು. ಸ್ವಚ್ಛತಾ ಕಾರ್ಯದಲ್ಲಿ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ, ಸಿ.ಎಸ್.ಎಫ್ ಸಿಬ್ಬಂದಿ, ಬಜಪೆ ರೋಟರಿ ಕ್ಲಬ್ ನ ಸದಸ್ಯರು, ಕೇಸರಿ ಆಟೋ ಫ್ರೆಂಡ್ಸ್ ಸದಸ್ಯರು, ಪಟ್ಟಣ ಪಂಚಾಯತ್ ಸಿಬ್ಬಂದಿ ಭಾಗವಹಿಸಿದರು.
Kshetra Samachara
25/09/2022 03:53 pm