ಮೂಡುಬಿದಿರೆ: ದ.ಕ.ಜಿ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ಮುಕ್ತಿ ಪ್ರಕಾಶನ ಪ್ರೌಢಶಾಲೆ ನೀರುಡೆ ಇವುಗಳ ಸಹಯೋಗದಲ್ಲಿ 2022-23ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟವು ಶುಕ್ರವಾರ ನೀರುಡೆ ಮುಕ್ತಿ ಪ್ರಕಾಶನ ಪ್ರೌಢಶಾಲೆಯ ಕ್ರೀಂಡಾಗಣದಲ್ಲಿ ನಡೆಯಿತು.ಶಾಲೆಯ ಸಂಚಾಲಕ ಫಾದರ್ ಆಲ್ಬನ್ ರೊಡ್ರಿಗಸ್ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಟ-ಊಟ-ಪಾಠದಂತೆ ಪ್ರತಿಯೊಬ್ಬರಿಗೂ ಕ್ರೀಡೆ ಅಗತ್ಯ.ಕೊರೋನಾದಿಂದ 2 ವರ್ಷಗಳ ಕಾಲ ಮೊಬೈಲ್ ಸೆಲ್ ನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಉತ್ತಮ ಸ್ಪರ್ಧಾ ಭಾವನೆಯೊಂದಿಗೆ ಆಟವಾಡಿ ಎಂದು ಶುಭ ಹಾರೈಸಿದರು.
ಮೂಡುಬಿದಿರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಫಲಕಗಳನ್ನು ಅನಾವರಣಗೊಳಿಸಿ ಮಾತನಾಡಿ ಕ್ರೀಡಾಪಟುಗಳು ಕ್ರೀಡೆಯ ನಿಯಮಗಳನ್ನು ಪಾಲಿಸಿ ಕ್ರೀಡಾಸ್ಫೂರ್ತಿಯೊಂದಿಗೆ ಆಟ ಆಡಬೇಕು. ಗೆಲ್ಲುವ ಛಲ ನಿಮ್ಮಲ್ಲಿರಲಿ ಆದರೆ ಇನ್ನೊಬ್ಬ ಕ್ರೀಡಾಪಟುವಿಗೆ ತೊಂದರೆಯಾಗದಿರಲಿ ಎಂದು ಕಿವಿ ಮಾತನ್ನು ಹೇಳಿದರು.
Kshetra Samachara
23/09/2022 04:11 pm