ಮೂಡುಬಿದಿರೆ: ಮಾಸ್ತಿಕಟ್ಟೆಯಲ್ಲಿ ಅಡಿಕೆ ದಾಸ್ತಾನು ಕೇಂದ್ರದ ಕಾರ್ಮಿಕನಾಗಿದ್ದು ಅಡಿಕೆ ಗೋದಾಮಿನ ಮಾಡಿನಿಂದ ಬಿದ್ದು ಕೋಮಾದಲ್ಲಿದ್ದ ಸಂದರ್ಭ ಸುಮಾರು 2700ಕಿ.ಮಿ. ದೂರಕ್ಕೆ ಐರಾವತ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದ ಚಾಲಕನಿಗೆ ಪ್ರಶಂಸೆಯ ಸುರಿಮಳೆ ದೊರೆತಿದೆ.
ಉತ್ತರ ಪ್ರದೇಶದ ಕಾರ್ಮಿಕ ಮಹಾಂದಿ ಅಸ್ಸನ್ ಎಂಬ ಕಾರ್ಮಿಕ ಈ ದುರಂತರ ದುರ್ದೈವಿಯಾಗಿದ್ದು ಅವರನ್ನು ದೂರದ ಉತ್ತರ ಪ್ರದೇಶದ ಮೊರದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಚಾಲಕ ಮೂಡುಬಿದಿರೆಯ ಅನಿಲ್ ರೂಬನ್ ಮೆಂಡೋನ್ಸಾ ಕರೆದೊಯ್ದಿದ್ದಾರೆ.
ರೋಗಿಯ ಕಡೆಯವರ ಹೊಣೆಗಾರಿಕೆಯಲ್ಲಿ ಆಸ್ಪತ್ರೆಯವರು ಬಿಡುಗಡೆ ಪತ್ರ ನೀಡಿದ್ದು ಪೊಲೀಸ್ ಠಾಣಿಯಿಂದ ಪಡೆದ ಪತ್ರದೊಂದಿಗೆ ಅನಿಲ್ ಮೆಂಡೋನ್ಸಾ ಅಶ್ವಥ್ ಎಂಬ ಇನ್ನೋರ್ವ ಚಾಲಕನನ್ನು ಕರೆದುಕೊಂಡು ಸೆ. 10ರ ಸಾಯಂಕಾಲ ಮೂಡುಬಿದಿರೆಯಿಂದ ಹೊರಟು ಸೆ. 12ರ ಬೆಳಿಗ್ಗೆ ಮೊರದಾಬಾದ್ ಸೇರಿದ್ದಾರೆ.
ಸುಮಾರು 2700 ಕಿ.ಮೀ ದೂರವನ್ನು ವೈದ್ಯರು, ದಾದಿಯರ ಅನುಪಸ್ಥಿತಿಯಲ್ಲಿ ಆಮ್ಲಜನಕದ ಜಾಡಿ ಇರಿಸಿಕೊಂಡು ಪ್ರಯಾಣಿಸಲಾಗಿದೆ.
ಅನಿಲ್ ರೂಬನ್ ಮೆಂಡೋನ್ಸಾರವರ ಈ ಸಾಹಸ ಮತ್ತು ಧೈರ್ಯಕ್ಕೆ ಇದೀಗ ಪ್ರಶಂಸೆ ದೊರೆತಿದೆ.
Kshetra Samachara
19/09/2022 01:05 pm