ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್ಎಸ್‌‌ಯುಐನಿಂದ 100 ವಿದ್ಯಾರ್ಥಿಗಳಿಗೆ ನಮ್ಮೂರ ಹೆಮ್ಮೆ ಪುರಸ್ಕಾರ

ಮೂಡುಬಿದಿರೆ: - 2021-22ನೇ ಸಾಲಿನಲ್ಲಿ ಎ‌ಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದಿರುವ 100ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎನ್ಎಸ್‌‌ಯುಐ ಮುಲ್ಕಿ ಮೂಡುಬಿದಿರೆ ಇದರ ವತಿಯಿಂದ ಭಾನುವಾರ ಸ್ವರ್ಣ ಮಂದಿರದಲ್ಲಿ 'ನಮ್ಮೂರ ಹೆಮ್ಮೆ' ಪ್ರತಿಭಾ ಪುರಸ್ಥಾರವನ್ನು ನೀಡಿ ಗೌರವಿಸಲಾಯಿತು.

ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದೇಶದ ಭವಿಷ್ಯದ ಶಕ್ತಿಗಳಾಗಿ ಯುವ ಪೀಳಿಗೆ ಹೊರ ಹೊಮ್ಮ ಬೇಕಾದರೆ ಕೆಎಎಸ್‌, ಐಎಎಸ್‌ನಂತಹ ಉನ್ನತ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುವ ಗುರಿಯನ್ನು ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಬೇಕೆಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಮನಸು ಮಾಡಿದರೆ ದ.ಕ ಜಿಲ್ಲೆಯನ್ನು ಕೋಮು ಸೌಹಾರ್ದತೆಯ ಅಭಿವೃದ್ಧಿಯ ಜಿಲ್ಲೆಯಾಗಿ ರೂಪಿಸಲು ಸಾಧ್ಯವಿದೆ, ತಮಗೆ ಬರುವ ಅಡೆತಡೆಗಳನ್ನು ಮೆಟ್ಟಿ ನಿಂತು ಸಾಧಿಸುವ ಛಲ ಮಾಡಬೇಕು ಎಂದ ಅವರು ಮೊದಲು ನೀವು ನಿಮ್ಮ ಮನೆಗೆ ಉತ್ತಮ ಮಕ್ಕಳಾಗಬೇಕೆಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಲೇರಿಯನ್ ಸಿಕ್ಖೇರಾ, ಮಹಿಳಾ. ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಎನ್‌.ಎಸ್‌.ಯುವ ಜಿಲ್ಲಾಧ್ಯಕ್ಷ ಸವಾದ್‌ ಸುಳ್ಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/08/2022 02:10 pm

Cinque Terre

10.49 K

Cinque Terre

0

ಸಂಬಂಧಿತ ಸುದ್ದಿ