ಬಜಪೆ:ಮುಚ್ಚೂರು ಸಮೀಪದ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಕ್ಷೇತ್ರದಿಂದ ಹೊರಡುವ ಚಿಕ್ಕಮೇಳ ಕಳೆದ ಹನ್ನೆರಡು ವರ್ಷಗಳಿಂದ ಚಿಕ್ಕಮೇಳದ ಮೂಲ ಮನೆ ಮನೆ ತಿರುಗಾಟ ಯಕ್ಷಗಾನ ಸೇವೆಯಿಂದ ಗಮನ ಸೆಳೆದಿದೆ.
ಮಂದಾರ್ತಿ,ಸೌಕೂರು ಸಹಿತ ಬಡಗುತಿಟ್ಟಿನ ಮೇಳಗಳ ಲ್ಲಿ ಸಕ್ರೀಯರಾಗಿರುವ ಆರು ಮಂದಿ ಕಲಾವಿದರು ನೆಲ್ಲಿತೀರ್ಥ ಕ್ಷೇತ್ರದಲ್ಲಿ ಒಂದಾಗಿ ಆಟದ ಮೇಳಗಳು ಒಳಗಾದ ಬಳಿಕ ಚಿಕ್ಕಮೇಳದ ತಿರುಗಾಟವು ಪ್ರಾರಂಭವಾಗುತ್ತದೆ.
ಸಂಜೆ 5:30 ರಿಂದ 10:30 ರ ವರೆಗೆ ಚಿಕ್ಕಮೇಳದ ಪ್ರದರ್ಶನವು ಮನೆ ಮನೆಗಳ ಲ್ಲಿ ನಡೆಯತ್ತದೆ.15 ರಿಂದ 20 ನಿಮಿಷದ ಕಥಾ ಪ್ರಸಂಗವನ್ನು ಪ್ರಸುತಪಡಿಸುತ್ತಾರೆ.ಗೆಜ್ಜೆ ಸೇವೆಯೊಂದಿಗೆ ರಜಾಕಾಲದ ಕಾಯಕವನ್ನಾಗಿ ನಿರ್ವಹಿಸುತ್ತಾರೆ.
Kshetra Samachara
21/07/2022 05:24 pm