ಬಜಪೆ:ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿಕಾ ನಗರ ಎಂಬಲ್ಲಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆಯ ನೀರು ಹೆದ್ದಾರಿಯ ಅಂಚಿನಲ್ಲಿಯೇ ಸಂಗ್ರಹವಾಗುತ್ತಿದ್ದು,ಪಾದಚಾರಿಗಳು ಹಾಗೂ ವಾಹನ ಸವಾರ ರಿಗೆ ಸಮಸ್ಯೆಯಾಗಿದೆ.ಸಮೀಪವೇ ಬಸ್ಸು ನಿಲ್ದಾಣ ಕೂಡ ವಿದ್ದು,ಪ್ರಯಾಣೆಕರು ಮಳೆಗಾಲದ ಸಂದರ್ಭ ಬಸ್ಸಿಗಾಗಿ ಕಾಯುವಂತಿಲ್ಲ.
ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಹೆದ್ದಾರಿಯ ಅಂಚಿನಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
18/07/2022 12:52 pm