ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರ

ಮೂಡುಬಿದಿರೆ : ದೀನ್ ದಯಾಳ್‌ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪ ಘಟಕದನ್ವಯ ಪುರಸಭೆಯ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರವು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಬುಧವಾರ ನಡೆಯಿತು.

ಪುರಸಭಾ ಅಧ್ಯಕ್ಷ ಪ್ರಸಾದ್‌ ಕುವಾರ್‌ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ನಗರವನ್ನು ಸ್ವಚ್ಛತೆ ಮತ್ತು ಸುಂದರೀಕರಣಗೊಳಿಸಲು ಬೀದಿ ಬದಿಯ ವ್ಯಾಪಾರಸ್ಥರ ಸಹಕಾರವೂ ಅಗತ್ಯ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಸಂಗ್ರಹವಾಗುವ ಕಸಗಳನ್ನು ವಿಂಗಡಿಸಿ ಒಂದೇ ಕಡೆಯಲ್ಲಿ ಕೂಡಿಟ್ಟು ನಂತರ ಪುರಸಭೆಯ ಕಸ ಸಂಗ್ರಹ ವಾಹನಕ್ಕೆ ನೀಡಬೇಕು. ಯೋಜನೆಯ ಸಂಪೂರ್ಣ ಪ್ರಯೋಜನದೊಂದಿಗೆ ಕೇಂದ್ರ ಸರಕಾರದ ಪಿ.ಎಂ.ಹಸ್ತನಿಧಿಯಡಿ ದೊರೆಯುವ ಸಾಲವನ್ನು ಹಾಗೂ ನೆರವನ್ನು ಸದ್ದಿ ನಿಯೋಗಪಡಿಸಿಕೊಳ್ಳುವಂತ ಎಂದು ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್‌ ಸಾಕ್ಷರತಾ ಆರ್ಥಿಕ ಸಮಾಲೋಚಕರಾದ ಲತೇಶ್‌ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಬ್ಯಾಂಕಿಗೆ, ವಿಮೆ, ಸರಕಾರದ ವಿವಿಧ ಸೌಲಭ್ಯಗಳು, ಎಂಚಣಿ, ಪಿ.ಎಂ ಸ್ವನಿಧಿ ಸಾಲ ಸೌಲಭ್ಯ ಪಡೆಯುವ ಬಗ್ಗೆ ಆರ್ಥಿಕ ಸಾಕ್ಷರತೆಯ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕಿ ಐರಿನ್‌ ರೆಬೆಲ್ಲೋ ಮಾತನಾಡಿ ಸರಕಾರ ಕಾಲ ಕಾಲಕ್ಕೆ ರೂಪಿಸತಕ್ಕೆ ಯೋಜನೆಗಳು ಬೀದಿ ಬದಿ ವ್ಯಾಪಾರಿಗಳ ಭವಿಷ್ಯತ್ತಿಗೆ ಉಪಯೋಗವಿದ್ದು, ಆರ್ಥಿಕ ಸ್ವಾವಲಂಬನೆಯೊಂದಿಗೆ ತಮ್ಮ ಕುಟುಂಬದ ಆರ್ಥಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಈ ಕಾರ್ಯಗಾರಗಳು ಸಹಕಾರಿಯಾಗಲಿವೆ ಎಂದರು.

ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಸರಿತಾ ಎಸ್.ಬಂಗೇರ, ಪೌಜಯಾ ಬೇಗಂ, ಸಮುದಾಯ ಸಂಘಟಕ ಮುರಳೀಧರೆ, ವ್ಯಾಪಾರಿ ಪ್ರಭಾಕರ ಕುಲಾಲ್ ಈ ಸಂದರ್ಭದಲ್ಲಿ, ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/07/2022 06:43 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ