ಕಾರ್ಕಳ: ಬೋಳ ಶ್ರೀ ಮೃತ್ಯುಂಜಯ ದೇವಸ್ಥಾನದಿಂದ ಪಂಚಲೋಹದ ಬಲಿ ಮೂರ್ತಿ, ಕಾಣಿಕೆ ಹುಂಡಿ, ಸಿಸಿ ಕ್ಯಾಮರದ ಡಿವಿಆರ್ ಕಳವಾಗಿದೆ. ಭಾನುವಾರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಬಲಿ ಮೂರ್ತಿ, ಹುಂಡಿಯಲ್ಲಿದ್ದ ಅಂದಾಜು 1.5 ಲಕ್ಷ ರೂ. ಕಳ್ಳತನವಾಗಿದೆ.
ಸೋಮವಾರ ಬೆಳಗ್ಗೆ ಆರು ಗಂಟೆಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಪಂಚಲೋಹದ ಬಲಿಮೂರ್ತಿ ಕಳವು ಮಾಡಿದ್ದಾರೆ. ಅಲ್ಲದೆ ಕಾಣಿಕೆ ಡಬ್ಬಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
Kshetra Samachara
11/07/2022 04:03 pm