ಬಜಪೆ: ಸರ್ಕಾರಿ ಸೇವೆಗಳು ಸುಲಭವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ ಪಕ್ಷವು ಇಂತಹ ಬಹುಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಹೇಳಿದರು.
ವಾಮಂಜೂರು ನಗರ ಉತ್ತರ ಮಂಡಲದ ಮನಪಾ ತಿರುವೈಲು 20ನೇ ವಾರ್ಡ್‍ನ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಮುಂದಾಳತ್ವದಲ್ಲಿ ಶ್ರೀ ರಾಮ ಭಜನಾ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ `ಸರ್ಕಾರಿ ಸೇವೆಗಳ ಆಯ್ದ ಉಚಿತ ಶಿಬಿರ' ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಸೇವೆಗಳ ಬಗ್ಗೆ ಹೆಚ್ಚಿನ ಅರಿವು ನಾಗರೀಕರಿಗೆ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅವರು ವಹಿಸಿದ್ದರು.
ಈ ಸಂದರ್ಭ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್, ಗುರುಪುರ ವ್ಯ.ಸೇ.ಸ.ಸಂಘ(ನಿ) ಇದರ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಸಂಘದ ನಿರ್ದೇಶಕ ಶ್ರೀನಿವಾಸ ಮಲ್ಲೂರು, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆಪಿ), ಶಕ್ತಿ ಕೇಂದ್ರ ಪ್ರಮುಖರಾದ ಸುರೇಂದ್ರ, ಯಶವಂತ ಪೂಜಾರಿ, ಎಸ್‍ಸಿ ಮೋರ್ಚಾ ಮುಖಂಡ ರಾಮ ಮುಗ್ರೋಡಿ, ಬಿಜೆಪಿ ಮುಖಂಡ ಅನಿಲ್ ರೈ ವಾಮಂಜೂರು, ಉದ್ಯಮಿ ರಘು ಸಾಲ್ಯಾನ್, ಬಿಜೆಪಿ ಪ್ರಮುಖರು, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಬಿರದಿಂದ ನೂರಾರು ನಾಗರಿಕರು ಆಧಾರ್ ಕಾರ್ಡ್ ತಿದ್ದುಪಡಿ, ವಿಧವಾ ವೇತನ ಹಾಗೂ ಅಂಗವಿಲಕರ ವೇತನಕ್ಕ ಅರ್ಜಿ, ಈ-ಶ್ರಮ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಅರ್ಜಿ, ಮತದಾರರ ಚೀಟಿ ಅರ್ಜಿ ಮತ್ತು ತಿದ್ದುಪಡಿ, ಕಟ್ಟಡ ಕಾರ್ಮಿಕರ ಗುರುತಿನ ಚೀಟಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿಸಿಕೊಂಡರು.
Kshetra Samachara
19/06/2022 03:42 pm