ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳಿಗೆ ಆದ್ಯತೆ; ಇಂಧನ ಸಚಿವ ಸುನಿಲ್ ಕುಮಾರ್

ಬಂಟ್ವಾಳ: ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳಿಗೆ ಆದ್ಯತೆಯನ್ನು ನೀಡಲಾಗುವುದು, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂಟ್ವಾಳ, ಊರ್ವ, ಕೋಟ ಮತ್ತು ಉದ್ಯಾವರಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗಿದ್ದು, ಪ್ರಥಮವಾಗಿ 11 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕೇಂದ್ರದ ಉದ್ಘಾಟನೆ ನಡೆದಿದೆ ಎಂದು ಇಂಧನ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ಬಂಟ್ವಾಳ ತಾಲೂಕಿನ ವಿದ್ಯಾಗಿರಿಯ ಅರ್ಬಿಗುಡ್ಡೆಯಲ್ಲಿ ನಿರ್ಮಿಸಲಾದ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಸಬ್ ಸ್ಟೇಶನ್ ಗಳನ್ನು ಹೆಚ್ಚು ನಿರ್ಮಾಣ ಮಾಡಲಾಗುತ್ತಿದೆ, ಕಲ್ಲಿದ್ದಲಿನ ಕೊರತೆ ರಾಜ್ಯಕ್ಕೆ ಆಗದಂತೆ ಕ್ರಮಕೈಗೊಳ್ಳಲಾಗಿದ್ದು, ನಿರಂತರ ಸ ರೂ ತಾನು ಆಗುತ್ತಿದೆ. ಇಲಾಖೆಯಲ್ಲಿ ಹೊಸದಾಗಿ 899 ಪವರ್ ಮ್ಯಾನ್ ಗಳ ನೇಮಕಾತಿ ಆಗಿದ್ದು ,600ಕ್ಕೂ ಅಧಿಕ ಮಂದಿ ಮೆಸ್ಕಾಂನಲ್ಲೇ ಆಗಿದೆ. 1500 ಮಂದಿಗೆ ಕೆಪಿಟಿಸಿಎಲ್ ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮುಂದಿನ ಜೂನ್ ನಲ್ಲಿ ಪರೀಕ್ಷೆ ನಡೆಯಲಿದೆ. ಪವರ್ ಮ್ಯಾನ್ ಗಳಿಗೆ ಇದ್ದ20 ಲಕ್ಷ ರೂಗಳ ಜೀವವಿಮೆ ಈಗ 40 ಲಕ್ಷಕ್ಕೇರಿಸಲಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

17/05/2022 07:07 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ