ಬಜಪೆ:ಬಿರುವೆರ್ ಕುಡ್ಲ ಬಜಪೆ ಘಟಕವು ಪ್ರಾರಂಭವಾಗಿ 5 ವರ್ಷ ತುಂಬಿದ ಸುಸಂದರ್ಭದಲ್ಲಿ ಬಜಪೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಘಟಕದ ವತಿಯಿಂದ ಗುರುಗಳಿಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಶ್ರೀ ಶಿವರಾಮ ಪೂಜಾರಿಯವರು ಪೂಜೆ ಸಲ್ಲಿಸಿದರು.
ಈ ಸಂದರ್ಭ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಉಪಾಧ್ಯಕ್ಷರುಗಳಾದ ಚಂದ್ರಪೂಜಾರಿ ಪೆರಾರ, ದಿನೇಶ್ ಬಂಗೇರ ಬಜಪೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಎಕ್ಕಾರು, ಕೋಶಾಧಿಕಾರಿ ರಾಕೇಶ್ ಅಂಚನ್ ಬಜಪೆ, ಕೀರ್ತನ್ ಅಮೀನ್, ಹೇಮಂತ್ ಪೂಜಾರಿ, ಯತೀಶ್ ಪೂಜಾರಿ ಉಪಸ್ಥಿತರಿದ್ದರು.
Kshetra Samachara
14/05/2022 10:53 am