ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರು ಗ್ರಾಮದ 22 ವರ್ಷದ ಯುವತಿ ನಾಪತ್ತೆ!

ಬೈಂದೂರು: ಇಲ್ಲಿನ ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು ನಿವಾಸಿ ಸುನೀತಾ (22) ಎಂಬ ಯುವತಿ ಏಪ್ರಿಲ್ 20ರ ಬೆಳಿಗ್ಗೆ ಸುಮಾರು 11:30ಕ್ಕೆ ಕೆಲಸಕ್ಕೆ ತೆರಳಿದ್ದು ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿರುತ್ತಾಳೆ. 5 ಅಡಿ 4 ಇಂಚು ಏತ್ತರ, ಕಪ್ಪು ಮೈಬಣ್ಣ ಹೊಂದಿರುವ ಈಕೆ ಕನ್ನಡ, ತೆಲುಗು, ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.ಒಂದು ವೇಳೆ ಈ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08254-258233 ಅನ್ನು ಸಂಪರ್ಕಿಸುವಂತೆ ಕೊಲ್ಲೂರು ಪೊಲೀಸ್ ಠಾಣೆ ಉಪನಿರೀಕ್ಷಕರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

27/04/2022 07:00 am

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ