ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಕಾಂಕ್ರೀಟಿಕರಣಗೊಂಡ ಎಕ್ಕಾರು ಕಾವೇರಬೆಟ್ಟು ರಸ್ತೆಯ ಉದ್ಘಾಟನೆ

ಬಜಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಎಕ್ಕಾರು ಗ್ರಾಮದ ಕಾವೇರಬೆಟ್ಟು ರಸ್ತೆಯು 10 ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟಿಕರಣ ಗೊಂಡಿದ್ದು, ರಸ್ತೆಯ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಇಂದು ನೆರವೇರಿಸಿದರು. ಈ ಸಂದರ್ಭ ಸಾಮಾಜಿಕ ನ್ಯಾಯ ಹಕ್ಕುಗಳ ಸಬಲೀಕರಣ ಸಚಿವಾಲಯ ಡಿ.ಎನ್.ಟಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಕೆ.ಭಾಸ್ಕರ್ ದಾಸ್ ಎಕ್ಕಾರು,ಎಕ್ಕಾರು ಶಕ್ತಿ ಕೇಂದ್ರದ ಅಧ್ಯಕ್ಷ ದಿನೇಶ್ ಕುಕ್ಯಾನ್,ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗ ಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಯಾನ್,ಮೂಲ್ಕಿ ಮೂಡಬಿದಿರೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್ ,ದೀಪಕ್ ಪೂಜಾರಿ,ತುಕರಾಮ ಪೂಜಾರಿ ತೆಂಕ ಬೆಟ್ಟು,ಶಿವ ಪ್ರಸಾದ್,ಪಂಚಾಯತ್ ಸದಸ್ಯರುಗಳಾದ ಸತೀಶ್ ಶೆಟ್ಟಿ,ಪ್ರವೀಣ್ ಆಚಾರ್ಯ,ಸುದೀಪ್ ಅರ್ ಅಮೀನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/04/2022 10:04 pm

Cinque Terre

4.72 K

Cinque Terre

0

ಸಂಬಂಧಿತ ಸುದ್ದಿ