ಬಡಗ ಎಡಪದವು:ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ MRPL - ನ CSR ಯೋಜನೆ ಮತ್ತು MGNREG ಉದ್ಯೋಗ ಖಾತ್ರಿ ಯೋಜನೆಯಡಿ 18.5 ಲಕ್ಷದ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಬಡಗ ಎಡಪದವು ಪಂಚಾಯತ್ ನ 11 ಲಕ್ಷ ಮೊತ್ತದ ಸ್ವಚ್ಚ ಸಂಕೀರ್ಣ ಘಟಕ, ಪುಸ್ತಕಗೂಡು, ಡಿಜಿಟಲ್ ಗ್ರಂಥಾಲಯವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಗೆ ಡಿಜಿಟಲ್ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡಿದ ಪ್ರದೀಪ್ ಶೆಟ್ಟಿ ಬೆಳ್ಳೆಚ್ಚಾರ್, ದತ್ತಶ್ರೀ ಚಾರಿಟೇಬಲ್ ಟ್ರಸ್ಟ್ ಪರವಾಗಿ ಗೌರವಾಧ್ಯಕ್ಷ ತಾರನಾಥ ಸಫಳಿಗ, ಶಿವಪ್ರಸಾದ್ ಶೆಟ್ಟಿ, ವಸಂತ ಕಾಪಿಕಾಡ್ ಇವರನ್ನು ಗೌರವಿಸಿ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭ 28 ಕಟ್ಟಡ ಕಾರ್ಮಿಕ ಕಾಡ್೯ ಹಾಗೂ 54 ಇ-ಶ್ರಮ್ ಕಾಡ್೯ ಫಲಾನುಭವಿಗಳ ಕಾಡ್೯ ಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯಜನಾರ್ಧನ ಗೌಡ, ಪಂಚಾಯತ್ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಯಶೋಧ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಪಂಚಾಯತ್ ಸದಸ್ಯರಾದ ವಸಂತ್, ಪ್ರದೀಪ್, ವರುಣ್ ಚಂದ್ರಹಾಸ್, ಶ್ರೀ ಲತಾ , ಸವಿತಾ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಣ್ , CRP- ಪುಷ್ಪಾವತಿ, ಮುಖ್ಯೋಪಾಧ್ಯಾಯಿನಿ ಶಾಂಭವಿ, SDMC ಅಧ್ಯಕ್ಷೆ ಸುನೀತಾ,ಬಡಗ ಎಡಪದವು ಶಕ್ತಿಕೆಂದ್ರ ಪ್ರಮುಖ್ ತಾರನಾಥ ಸಫಳಿಗ, ಲಲಿತಾ ಶೆಟ್ಟಿಗಾರ್ ಬೂತ್ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಚಂದ್ರಹಾಸ್, ರಮೇಶ್ ಶೆಟ್ಟಿ, ಯಶವಂತ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/01/2022 06:50 pm