ಮುಲ್ಕಿ: ದೇಶದ ಮೊದಲ ರಕ್ಷಣಾ ಮುಖ್ಯಸ್ಥರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರೆ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ಕುಬೆವೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ದ್ವಾರದ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ವೀರ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿ ನಿವೃತ್ತ ಯೋಧ ಮಾಧವ ಪೂಜಾರಿ ಕಿಲ್ಪಾಡಿ ಮಾತನಾಡಿ ನಿವೃತ್ತ ಯೋಧರ ಕೈಂಕರ್ಯಗಳನ್ನು ನೆನಪಿಸಿಕೊಳ್ಳುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭಾರತೀಯರು ಮುಂದಾಗಬೇಕು ಎಂದರು
ಈ ಸಂದರ್ಭ ನಿವೃತ್ತ ಯೋಧ ನಾರಾಯಣ ರೈ, ಅತಿಕಾರಿಬೆಟ್ಟು ಪಂಚಾಯತ್ ಸದಸ್ಯೆ ವೇದಾವತಿ, ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ, ಮಿತ್ರಮಂಡಳಿ, ಮಹಿಳಾ ಮಂಡಳಿ ಪದಾಧಿಕಾರಿಗಳಾದ ಮುರಳೀಧರ ಭಂಡಾರಿ, ಉದ್ಯಮಿ ಶ್ರೀಕಾಂತ್ ಶೆಟ್ಟಿ, ಸುಂದರ ಶೆಟ್ಟಿ ಕುಬೆವೂರು, ಅಶ್ವಿನ್ ಆಳ್ವ, ಜಯಕುಮಾರ್,ರಾಜ ಭಟ್, ಪ್ರಕಾಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ,ಸತೀಶ್ ಕಿಲ್ಪಾಡಿ, ಉದಯಕುಮಾರ್ ಶೆಟ್ಟಿ ಅಧಿಧನ್ ಮುಲ್ಕಿ, ಭಾಸ್ಕರ ಶೆಟ್ಟಿಗಾರ್, ದಿನೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/12/2021 10:35 am