ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ನಾಪತ್ತೆಯಾಗಿ 11 ದಿನಗಳಾದರೂ ಬಾರದ ಮಗ: ತಾಯಿಯ ಅಳಲು

ಬಂಟ್ವಾಳ: ರೆಂಗೇಲು ನಿವಾಸಿಯಾಗಿರುವ ಸೊಸೆಯ ಮನೆಯಲ್ಲಿದ್ದ ತನ್ನ ಮಗ ಗಣೇಶ (38) ನಾಪತ್ತೆಯಾಗಿ 11 ದಿನಗಳಾದರೂ ಇನ್ನೂ ಮನೆಗೆ ಬಂದಿಲ್ಲ ಎಂದು ಆತನ ತಾಯಿ ಸುಮತಿ ಯಾನೆ ಉಮಾವತಿ ತಿಳಿಸಿದ್ದು, ಈ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಲ್ಲಡ್ಕ ಶಾಂತಿಗುಡ್ಡೆ ನಿವಾಸಿಯಾಗಿದ್ದ ತನ್ನ ಮಗ ಗಣೇಶ್ ಕಲ್ಲಡ್ಕದಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ. ಈತನಿಗೆ ಇದೇ ವರ್ಷ ಜೂನ್ 20ರಂದು ರೆಂಗೇಲು ನಿವಾಸಿಯೊಂದಿಗೆ ಮದುವೆಯಾಗಿತ್ತು. ಮದುವೆಯ ಬಳಿಕ ಹೆಂಡತಿಯ ಮನೆಯಲ್ಲಿ ಮನೆಯಳಿಯನಾಗಿ ವಾಸಿಸುತ್ತಿದ್ದ. ಎರಡು ವಾರಗಳ ಹಿಂದೆ ಅವನ ಪತ್ನಿ ಟೈಲರ್ ವೃತ್ತಿಯನ್ನು ಬಿಡಿಸಿ ಬಿ.ಸಿ.ರೋಡಿನ ಹೋಟೆಲ್ ಒಂದಕ್ಕೆ ಸೇರಿಸಿದ್ದಳು. ಅವನಿಗೆ ಹೋಟೆಲ್ ಕೆಲಸ ಗೊತ್ತಿರುದಿಲ್ಲ. ಅದಾದ ಬಳಿಕ 11 ದಿನಗಳ ಹಿಂದೆ ಕಾಣೆಯಾಗಿರುತ್ತಾನೆ.

ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಅವರು ಕೂಲಂಕಷವಾಗಿ ತನಿಖೆ ನಡೆಸಿದರೆ, ಮಗ ಎಲ್ಲಿ ಹೋಗಿದ್ದಾನೆ, ಏನಾಗಿದ್ದಾನೆ ಎಂಬ ವಿಚಾರ ದೊರಕಬಹುದು, ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸೋಮನಾಥ್, ಸುರೇಶ್, ಸತೀಶ್ ನಾಯ್ಕ್ ಮತ್ತಿತರರು ಇದ್ದರು.

Edited By : PublicNext Desk
Kshetra Samachara

Kshetra Samachara

13/12/2021 07:47 pm

Cinque Terre

4.74 K

Cinque Terre

0

ಸಂಬಂಧಿತ ಸುದ್ದಿ