ಬಂಟ್ವಾಳ ತಾಲೂಕಿನ ಗಡಿಗ್ರಾಮವಾದ ಕರೋಪಾಡಿ ಗ್ರಾಮಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿಜೆಪಿಯ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆಂದು ಭೇಟಿ ನೀಡಿದ್ದು, ಈ ಸಂದರ್ಭ ಸಲ್ಲಿಸಲಾದ ಮನವಿಗಳಿಗೆ ಸ್ಥಳದಲ್ಲೇ ಸ್ಪಂದನೆ ನೀಡಿದರು.
ಗ್ರಾಮದಲ್ಲಿ ರಸ್ತೆ, ಕಿಂಡಿ ಅಣೆಕಟ್ಟು, ತಡೆಗೋಡೆ, ಶಾಲೆಗಳ ಮೂಲಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಅನೇಕ ಮನವಿಗಳನ್ನು ಈ ಸಂದರ್ಭದಲ್ಲಿ ಸ್ವೀಕರಿಸಿದರು. ಕರೋಪಾಡಿ ಗ್ರಾ.ಪಂ.ವ್ಯಾಪ್ತಿಯ ಆನೆಕಲ್ಲು ಬೂತ್ ಸಂಖ್ಯೆ235 ರ ಅಧ್ಯಕ್ಷ ಗಣಪತಿ ಭಟ್, ಬೂತ್ ಸಂಖ್ಯೆ 236 ರ ಅಧ್ಯಕ್ಷ ಯೋಗೀಶ್ ಮೂಲ್ಯ, ಬೂತ್ ಸಂಖ್ಯೆ 237 ರ ಅಧ್ಯಕ್ಷ ಆಶ್ಚಥ್ ಶೆಟ್ಟಿ, ಬೂತ್ ಸಂಖ್ಯೆ 238 ರ ಅಧ್ಯಕ್ಷ ಜಯರಾಮ ನಾಯಕ್, ಬೂತ್ ಸಂಖ್ಯೆ 239 ರ ಅಧ್ಯಕ್ಷ ಧರ್ಮೇಂದ್ರ ಒಡಿಯೂರು, ಬೂತ್ ಸಂಖ್ಯೆ 240 ರ ಅಧ್ಯಕ್ಷ ಶಶಾಂಕ್ ಭಟ್ ಮನೆಗೆ ಶಾಸಕರು ಭೇಟಿ ನೀಡಿದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ, ನಗರ ನೈರ್ಮಲ್ಯ ನಿಗಮ ಸದಸ್ಯೆ ಸುಲೋಚನ ಜಿ.ಕೆ ಭಟ್, ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಕೊಳ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರಮುಖರಾದ ಲೋಹಿತ್, ಅರವಿಂದ ರೈ, ಅಭಿಷೇಕ್ ರೈ, ವಿಶ್ವನಾಥ್ ಪೂಜಾರಿ ಕಟ್ಟತ್ತಿಲ, ರಾಮನಾಯ್ಕ್, ಆದರ್ಶ್ , ಗಣೇಶ ಮಂಚಿ, ಉದಯರಮಣ, ರಾಮಚಂದ್ರ ಶೆಣೈ, ಪ್ರವೀಣ್ ಬೆಡಗುಡ್ಡೆ, ರಘುನಾಥ್ ಶೆಟ್ಟಿ ಪಟ್ಲ, ವಿನೋದ್ ಶೆಟ್ಟಿ ಪಟ್ಲ, ವಿದ್ಯೇಶ್ ರೈ, ಶ್ರೀನಾಥ್ ನಾಯ್ಗ್, ಶಶಿಕಿರಣ್ ಅನೆಯಾಲಗುತ್ತು, ಲಕ್ಷಣ್ ಮಾಂಬಾಡಿ, ಪದ್ಮನಾಭ ಮುಗುಳಿ, ನವೀನ್ ಶಾರದಕೋಡಿ, ರವೀಂದ್ರ ಓಡಿಯೂರು, ಪ್ರಶಾಂತ್ ಬೇಡಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/11/2021 04:01 pm