ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2021-22ನೇ ಸಾಲಿನ ಪಡುಪೆರಾರ ಗ್ರಾ.ಪಂ ನ ಗ್ರಾಮಸಭೆ

ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್ ನ 2021- 22ನೇ ಸಾಲಿನ ಗ್ರಾಮ ಸಭೆಯು ಪಂಚಾಯತ್ ನ ಅಧ್ಯಕ್ಷೆ ಶ್ರೀ ಮತಿ ಅಮಿತಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮಸಭೆಯಲ್ಲಿ ಸುಂಕದಕಟ್ಟೆಯ ಪಾಲಿಟೆಕ್ನಿಕ್ ತಿರುವಿನಲ್ಲಿದ್ದ ಆಲದ ಮರವನ್ನು ಕಡಿದು ತೆರವುಗೊಳಿಸಿದಲ್ಲದೆ,ಮರ ಕಡಿದು ತೆರವು ಗೊಳಿಸಿದ ಖರ್ಚು,ಬಿಲ್ಲು ಪಾವತಿ,ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿ,ಅರಣ್ಯ ಇಲಾಖೆಯ ವರದಿ ಯ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದ ಗ್ರಾಮಸ್ಥರು.

ಅಲ್ಲದೆ ಜಮಾ ಬಂಧಿ ಕಾರ್ಯಕ್ರಮದ ವಿಡಿಯೋ ಸಿಡಿ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಇದು ವರೆಗೂ ಸಿಡಿ ನೀಡಿಲ್ಲ ಎಂದು ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಯಿತು.ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು.ನೋಡಲ್ ಅಧಿಕಾರಿಯಾಗಿ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮತಿ ರಾಜಲಕ್ಷ್ಮೀ,ಪಂಚಾಯತ್ ಉಪಾಧ್ಯಕ್ಷೆ ಸೇಸಮ್ಮ,ಪಿಡಿಓ ಉಗ್ಗಪ್ಪ ಮೂಲ್ಯ,ಕಾರ್ಯದರ್ಶಿ ದೀಪ್ತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/09/2021 07:39 am

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ