ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆದ ಬಳಿಕ ಸಾಕಷ್ಟು ಅಭಿವೃದ್ದಿ ಕಂಡಿದೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಪ್ರಯುಕ್ತ ನಡೆದ, ಸ್ವಸಹಾಯ ಸಂಘಗಳು ತಯಾರಿಸಿದ ರಾಷ್ಟ್ರಧ್ವಜ ಬಿಡುಗಡೆ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಹತ್ತನೇ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸುದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೌರಕಾರ್ಮಿಕರಿಗೆ ಸಮವಸ್ರ ವಿತರಣೆ ಮಾಡಲಾಯಿತು
ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಪ್ರಯುಕ್ತ ಪಂಚಾಯತ್ ವ್ಯಾಪ್ತಿಯ ಸ್ವಸಹಾಯ ಸಂಘಗಳು ವುಟಗಳನ್ನು ತಯಾರಿಸಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತವಾಗಿ ನೀಡಲಾಗುವುದು ಎಂದರು.
ಶಿಕ್ಣಣ ಕ್ಷೇತ್ರದಲ್ಲಿ ಸಾಧನೆಗೈದ ಅಹಮ್ಮದ್ ಶಿಹಾಬ್, ರಾನ್ಸನ್ ಫೆರ್ನಾಂಡಿಸ್, ಸ್ವಾತಿ ಶೆಟ್ಟಿ, ಸದೋಭಿತ ಭಟ್, ಶಶಾಂಕ್, ರೋಷಾನ್ ರವರನ್ನು ಸನ್ಮಾನಿಸಲಾಯಿತು. ಕಮಲ, ಬ್ರಹ್ಮಾನಂದ, ಪುಷ್ಪ, ಪ್ರಥ್ವಿ, ಹರ್ಷಿತ ಸನ್ಮಾನ ಪತ್ರ ವಾಚಿಸಿದರು. ಈ ಸಂದರ್ಭ ಪ್ರಮೋದ್ ಕುಮಾರ್, ದೇವಿದಾಸ್ ಶೆಟ್ಟಿ, ಈಶ್ವರ್ ಕಟೀಲ್, ಡಾ.ಜೀವಿತ, ಭುವನಾಭಿರಾಮ ಉಡುಪ, ಸ್ಯಾನಿ ಪಿಂಟೋ, ಪುರುಶೋತ್ತಮ ಶೆಟ್ಟಿ, ಸಂತಾನ್ ಡಿಸೋಜ, ಪ್ರಾನ್ಸಿಸ್ ಸೆರಾವೋ, ಅಭಿಲಾಷ್ ಶೆಟ್ಟಿ, ಕೇಶವ ಕರ್ಕೇರ, ಸ್ವರಾಜ್ ಶೆಟ್ಟಿ, ಶರತ್ ಶೆಟ್ಟಿ ಹಿಲ್ಡಾ ಡಿಸೋಜ ಸುಜಾತ ಮತ್ತಿತರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹಿಷ್ ಚೌಟ ಪ್ರಸ್ತಾವನೆಗೈದು ಸ್ವಾಗತಿಸಿದರು, ರೇವತಿ ಪುರುಶೋತ್ತಮ್ ನಿರೂಪಿಸಿದರು.
Kshetra Samachara
02/08/2022 05:51 pm