ಮಂಗಳೂರು: ಬಹುಮಹಡಿ ಕಟ್ಟಡದ ಭದ್ರತಾ ಕಾವಲುಗಾರನೊಬ್ಬ ಒಂಬತ್ತನೇ ಮಹಡಿಯಿಂದ ಕಾಲು ಜಾರಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ(55) ಎಂದು ಗುರುತಿಸಲಾಗಿದೆ. ಇವರು ನಗರಸಭೆ ಬಳಿಯ ಖಾಸಗಿ ಬಹುಮಹಡಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದರು. 9ನೇ ಮಹಡಿಗೆ ತೆರಳಿ ಟ್ಯಾಂಕಿನಲ್ಲಿದ್ದ ನೀರು ಪರಿಶೀಲನೆ ಮಾಡುತ್ತಿದ್ದ ಸಮಯದಲ್ಲಿ ಆಯ ತಪ್ಪಿದ ಪರಿಣಾಮ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/11/2020 09:44 am