ಪಡುಬಿದ್ರಿ : ನೀರಿನಲ್ಲಿ ಮುಳುಗಿ ತರುಣರಿಬ್ಬರು ಮೃತಪಟ್ಟ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿಯಲ್ಲಿ ಸಂಭವಿಸಿದೆ.
ಹೆಜಮಾಡಿ ಎನ್.ಎಸ್. ರಸ್ತೆಯ ಮೊಹ್ಸಿನ್ (16) ಹಾಗೂ ಎಸ್.ಎಸ್.ರಸ್ತೆ ನಿವಾಸಿ ಮುಹಮ್ಮದ್ ರಾಯಿಸ್ (16) ಮೃತಪಟ್ಟವರು.
ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಲಿವೆ ಬಳಿ ಮೂವರು ತರುಣರು ನೀರಿಗಿಳಿದು ಈಜುತ್ತಿದ್ದಂತೆಯೇ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಮಹಿಳೆಯೋರ್ವರು ಸ್ಥಳೀಯರಿಗೆ ಮಾಹಿತಿ ನೀಡಿದರು. ತಕ್ಷಣ ಮೂವರನ್ನು ಮೇಲಕ್ಕೆತ್ತಲಾಗಿದ್ದು, ಓರ್ವ ಅದಾಗಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮುಹಮ್ಮದ್ ನಬೀಲ್ ಎಂಬಾತ ಬಚಾವಾಗಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
05/11/2020 06:58 pm