ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಬೀಚ್‌ನಲ್ಲಿ ಸಾವಿರಾರು ಪ್ರವಾಸಿಗರು; ಜಲಕ್ರೀಡೆಗಳಲ್ಲಿ ಮಿಂದೇಳುತ್ತಿರುವ ಜನತೆ

ಮಲ್ಪೆ: ಪ್ರಸಿದ್ಧ ಮಲ್ಪೆ ಬೀಚ್‌ಗೆ ಕಳೆದ ಕೆಲವು ದಿನಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಹಲವು ಶಾಲೆಗಳಲ್ಲಿ ದಸರಾ ರಜೆ ಇನ್ನೂ ಮುಗಿಯದ ಕಾರಣ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಬೀಚ್‌ನಲ್ಲಿ ಕಂಡು ಬರುತ್ತಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಇಲ್ಲಿ ಜಲಕ್ರೀಡೆಗಳು ಪ್ರಾರಂಭಗೊಂಡಿದ್ದವು. ಬೋಟಿಂಗ್, ಪ್ಯಾರಾಚೂಟ್ ರೈಡ್, ಸ್ಪೀಡ್ ಬೋಟಿಂಗ್, ಬಲೂನ್ ಜಂಪ್ ಸಹಿತ ಹಲವು ಕ್ರೀಡಾಚಟುವಟಿಕೆಗಳಲ್ಲಿ ಪ್ರವಾಸಿಗರು ಮೋಜು ಮಾಡುತ್ತಿದ್ದಾರೆ.

ಮಳೆಗಾಲದ ಎರಡೂವರೆ ತಿಂಗಳು ಸ್ಥಗಿತಗೊಂಡಿದ್ದ ಬಹುತೇಕ ಕ್ರೀಡೆಗಳು ಈಗ ಪ್ರಾರಂಭಗೊಂಡಿವೆ. ರಾಜ್ಯದ ನಾನಾ ಜಿಲ್ಲೆಗಳ ಜನ ಉಡುಪಿಯ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಟ್ಟು ಮಲ್ಪೆ ಬೀಚ್ ನತ್ತ ಧಾವಿಸಿ ಬರುತ್ತಿದ್ದಾರೆ. ಕಡಲ ಕಿನಾರೆ ಮತ್ತು ಅಲೆಯಲ್ಲಿ ಆಡಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಬೀಚ್‌ನ ಒಂದು ಬದಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೆಟ್ ಅಳವಡಿಸಲಾಗಿದ್ದು, ಪ್ರವಾಸಿಗರನ್ನು ವಾಚ್ ಮಾಡಲು ಗಾರ್ಡ್ ಗಳನ್ನು ನೇಮಿಸಲಾಗಿದೆ.

Edited By : Manjunath H D
PublicNext

PublicNext

12/10/2022 06:40 pm

Cinque Terre

48.76 K

Cinque Terre

0