ಹೆಬ್ರಿ: ಹೆಬ್ರಿಯ ಮೇಲ್ ಪೇಟೆಯ ಮನೆಯೊಂದರ ಕೊಟ್ಟಿಗೆಯಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದಯ ಪರಿಸರದ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಇದಾಗಿತ್ತು. ತಕ್ಷಣ ಅಲ್ಬಾಡಿಯ ಉರಗತಜ್ಞ ನಾಗರಾಜ ನಾಯ್ಕ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು.
ಅವರು ಕಾಳಿಂಗನನ್ನು ಉಪಾಯದಿಂದ ಹಿಡಿದು ಸೋಮೇಶ್ವರ ಅಭಯಾರಣ್ಯಕ್ಕೆ ಬಿಡುವುದರೊಂದಿಗೆ ಜನ ನಿಟ್ಟುಸಿರು ಬಿಡುವಮತಾಯಿತು. ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯ ಹೆಚ್ ಬಿ ಸುರೇಶ್ ಈ ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.
Kshetra Samachara
16/09/2022 12:59 pm