ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಗ್ರೀನ್ ಇಂಡಿಯಾ ಮೂವ್‌ಮೆಂಟ್ ಇವರ ಸಹಯೋಗದೊಂದಿಗೆ ಅರಣ್ಯ ಬೆಳೆಸಿ ಪರಿಸರ ಉಳಿಸಿ ಎಂಬ ನಿಟ್ಟಿನಲ್ಲಿ ಜಪಾನಿನ ಮಿಯಾವಾಕಿ ಪದ್ಧತಿಯಲ್ಲಿ ಅರಣ್ಯ ಬೆಳೆಸುವ ಪದ್ಧತಿಗೆ ರೊ.ಡಾ| ಉತ್ತಮ್ ಶೆಟ್ಟಿಯವರ ಪರಿಸರದಲ್ಲಿ ಚಾಲನೆ ನೀಡಲಾಯಿತು.
ಗಿಡ ನೆಟ್ಟು ಚಾಲನೆ ನೀಡಿದ ಕೋಟೇಶ್ವರದ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಅನುಪಮ ಎಸ್ ಶೆಟ್ಟಿ ಮಾತನಾಡಿ, “ಮಿಯಾವಾಕಿ ಪದ್ಧತಿಯಲ್ಲಿ ಬೆಳೆಸಿದ ಅರಣ್ಯ 25 ವರ್ಷಗಳಲ್ಲಿ ಪದ್ಧತಿಯಲ್ಲಿ ಬೆಳೆಸಿದ ಅರಣ್ಯ 25 ವರ್ಷಗಳಲ್ಲಿ ದೊಡ್ಡಮರಗಳಾಗಿ, ಅದನ್ನು ಕಡಿದು ಪುನಹ ಅರಣ್ಯ ಬೆಳೆಸಬಹುದು. ಇದರಿಂದಾಗಿ ಹಲವು ಕಿ. ಮಿ.ದೂರದ ತನಕ ನಮಗೆ ಆಕ್ಸಿಜನ್ ಸಿಗುತ್ತದೆ” ಎಂದು ಹೇಳಿದರು.
ಪ್ರಸ್ತಾವಿಸಿ ಮಾತನಾಡಿದ ರೊ. ಡಾ|ಉತ್ತಮ್ ಶೆಟ್ಟಿ “ಮಿಯಾವಾಕಿ ಪದ್ಧತಿಯಲ್ಲಿ ಮರ ಗಿಡಗಳನ್ನು ಹತ್ತಿರ ಹತ್ತಿರವಾಗಿ ಬೆಳೆಸುತ್ತಾರೆ, ಅವಾಗ ಮರಗಿಡಗಳು ಸೂರ್ಯನ ಬೆಳಕು ಪಡೆದುಕೊಳ್ಳಲು ಮರ ಗಿಡಗಳಲ್ಲಿ ಪೈಪೋಟಿ ನಡೆದು ತಾ ಮುಂದೆ ನಾ ಮುಂದೆ ಎಂದು ಎತ್ತರಕ್ಕೆ ಬೆಳೆಯುತ್ತವೆ, ಮಾತ್ರವಲ್ಲ ಹತ್ತಿರ ಹತ್ತಿರ ಇರುವುದರಿಂದ ಗಾಳಿ ಮಳೆಗೆ, ಬೀಳದೆ ತಡೆಯೊಡ್ಡಿ ನಿಲ್ಲುತ್ತವೆ. ಮರ ಗಿಡಗಳು ನೆಡುವ ಮೊದಲು, ಮೊದಲಿನ ಮಣ್ಣು ತೆಗೆದು, ಅಲ್ಲಿ ಹದ ಮಾಡಿ ಬೇರುಗಳು ವೇಗವಾಗಿ ಆಳಕ್ಕೆ ಹೋಗುವಂತೆ ಮಾಡ ಬೇಕಾಗುತ್ತದೆ'' ಎಂದರು. ಗ್ರೀನ್ ಇಂಡಿಯಾ ಮೂವ್‌ಮೆಂಟಿನ ಸದಸ್ಯ ಲೇಖಕ ಮುನಿಯಾಲು ಗಣೇಶ ಶೆಣೈ ವಿವಿಧ ಮರಗಳಿಂದ ಆಗುವ ಉಪಯೋಗಗಳನ್ನು ತಿಳಿಸಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಅಧ್ಯಕ್ಷ ರೂ. ಸತ್ಯನಾರಾಯಣ ಪುರಾಣಿಕ್ ಸ್ವಾಗತಿಸಿ, ರೊ.ಜೂಡಿತ್ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿದರು. ರೊ.ವಾಸುದೇವ ಕಾರಂತ ಧನ್ಯವಾದಗಳನ್ನು ಸಮರ್ಪಿಸಿದರು.
Kshetra Samachara
29/08/2022 09:36 pm