ಸುಳ್ಯ: ಮಡಿಕೇರಿ-ಮಂಗಳೂರು ಪರ್ಯಾಯ ರಸ್ತೆಗೂ ಕುಸಿತದ ಭೀತಿ ಎದುರಾಗಿದ್ದು ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಪರಿಣಾಮ ಮಂಗಳೂರಿನಿಂದ ಮಡಿಕೇರಿ ಮೂಲಕ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತಿತರ ಸ್ಥಳಗಳಿಗೆ ಹೊರಟ ಎಲ್ಲ ಪ್ರಯಾಣಿಕರು ಇದೀಗ ಸಂಪಾಜೆಯ ಗೇಟ್ ಬಳಿ ಸಿಲುಕಿಕೊಂಡಿದ್ದಾರೆ. ಸಂಪಾಜೆ ಗೇಟ್ ಬಂದ್ ಮಾಡಲಾಗಿದ್ದು ಯಾವುದೇ ವಾಹನವನ್ನು ಮಡಿಕೇರಿ ಕಡೆಗೆ ಬಿಡುತ್ತಿಲ್ಲ.
ಏಕೈಕ ರಸ್ತೆಯೂ ಕುಸಿತ..!
ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ ಸಮೀಪದ ಜಿಲ್ಲಾಧಿಕಾರಿ ಕಚೇರಿ ಬಳಿ ಕುಸಿಯುವ ಭೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರವನ್ನು ಆ ಮಾರ್ಗದಲ್ಲಿ ನಿಷೇಧಿಸಲಾಗಿದೆ.
ದೂರದ ಊರಿಗೆ ಪ್ರಯಾಣ ಬಳಸುವವರಿಗೆ ತಾತ್ಕಾಲಿಕವಾಗಿ ತಾಳತ್ತಮನೆ ಮೂಲಕ ಮೇಕೆರಿಯಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಮೆಕೇರಿ ಬಳಿ ರಸ್ತೆಯೂ ಕುಸಿತದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಾಹನ ಸಂಚಾರ ಮಾಡದಂತೆ ತಡೆ ಹಿಡಿದಿದ್ದಾರೆ.
Kshetra Samachara
18/07/2022 10:44 pm