ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೀನಕಳಿಯದಲ್ಲಿ ಕಣ್ಣೆದುರೇ ಮನೆ- ರಸ್ತೆ ಕಡಲ ಪಾಲು!

ಮಂಗಳೂರು: ಬೈಕಂಪಾಡಿ ಬಳಿಯ ಮೀನಕಳಿಯದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದ್ದು, ಮನೆ-ರಸ್ತೆ ಕಡಲ ಒಡಲು ಸೇರಿದೆ. ಇನ್ನೂ ಹಲವು ಮನೆಗಳು ನೀರುಪಾಲಾಗುವ ಭೀತಿಯಲ್ಲಿದ್ದು, ತೀರವಾಸಿಗಳು ಸ್ಥಳಾಂತರಗೊಂಡಿದ್ದಾರೆ.

ಇಲ್ಲಿ ಮನೆ ಮಾಡಿ, ಬದುಕು ಕಟ್ಟಿಕೊಂಡಿರುವವರಲ್ಲಿ ಉತ್ತರ ಕರ್ನಾಟಕದ ಕಾರ್ಮಿಕ ಕುಟುಂಬಗಳೇ ಬಹಳಷ್ಟಿದೆ. ಕಂದಾಯ(ಕುಮ್ಕಿ) ಸ್ಥಳದಲ್ಲಿ ಮನೆ ನಿರ್ಮಿಸಿ ವಾಸವಾಗಿರುವ ಈ ಜನರಿಗೆ ಅಧಿಕೃತವಾಗಿ ಮನೆ ಸಂಖ್ಯೆ ನೀಡಲಾಗಿಲ್ಲ. ಮಾನವೀಯತೆ ನೆಲೆಯಲ್ಲಷ್ಟೇ ತಾತ್ಕಾಲಿಕವಾಗಿ ಜಾಗ ಕೊಟ್ಟು, ಸೌಲಭ್ಯ ನೀಡಲಾಗಿತ್ತು. ಇದೀಗ ಕಡಲ ಪಾಲಾದ ಮನೆಗಳಿಗೆ ಸರಕಾರದಿಂದ ಪರಿಹಾರ ಸಿಗುವುದು ಡೌಟು.

ಯಾಕೆಂದರೆ, ಕಡಲ ತೀರ ಪ್ರದೇಶದ ಜಾಗಗಳನ್ನು ಈ ಹಿಂದೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ವೇಳೆ ಉತ್ತರ ಕರ್ನಾಟಕದ ಮಂದಿ ಖರೀದಿಸಿ, ಇನ್ನಷ್ಟು ಬಾಡಿಗೆ ಕೊಠಡಿಗಳನ್ನು ಕಡಲ ತಟದವರೆಗೂ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರು! ಇವುಗಳೀಗ ಸಮುದ್ರರಾಜನಿಗೆ ಸುಲಭದ ತುತ್ತಾಗಿದೆ. ಕೆಲವು ಕಡೆ ತುರ್ತು ಕಾಮಗಾರಿಯಾಗಿ ಚೀಲಕ್ಕೆ ಮರಳು ತುಂಬಿ ತೀರಕ್ಕೆ ಅಡ್ಡವಾಗಿ ಇಡಲಾಗುತ್ತಿದೆ.

ಪರಿಸರದಲ್ಲಿ ರಾಜಕಾಲುವೆ ಸಂಪರ್ಕಿಸಲು ಸೂಕ್ತ ಚರಂಡಿ ನಿರ್ಮಾಣವಾಗಿಲ್ಲ. ಇರುವ ಚರಂಡಿಗಳು ಅತಿಕ್ರಮಣಕ್ಕೆ ಒಳಗಾಗಿದೆ. ಇದರಿಂದಾಗಿ ಮಳೆನೀರು ಸರಾಗವಾಗಿ ಹರಿದು ಹೋಗಲಾಗದೆ, ಮನೆಗಳು ಜಲಾವೃತವಾಗಿದೆ ಜತೆಗೆ ಒಳಚರಂಡಿಯ ಮಲಿನ ನೀರು ಮಳೆನೀರಿನೊಂದಿಗೆ ಬೆರೆತು ಪರಿಸರವಿಡೀ ದುರ್ವಾಸನೆಯುಕ್ತವಾಗಿದ್ದು, ಬಾವಿನೀರೂ ಕಲುಷಿತಗೊಂಡಿದೆ.

- ಮನೋಜ್‌ ಕೆ.ಬೆಂಗ್ರೆ 'ಪಬ್ಲಿಕ್‌ ನೆಕ್ಸ್ಟ್‌ ' ಮಂಗಳೂರು

Edited By : Shivu K
Kshetra Samachara

Kshetra Samachara

15/07/2022 10:59 am

Cinque Terre

7.93 K

Cinque Terre

1