ಬಜಪೆ:ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗಿಲ ಬೈಲು ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದ್ದು,ಸಮೀಪದ ಹಲವು ಮನೆಗಳು ಅಪಾಯದ ಅಂಚಿನಲ್ಲಿದೆ.ಭಾರೀ ಪ್ರಮಾಣದಲ್ಲಿ ಕುಸಿದ ಗುಡ್ಡದ ಮಣ್ಣು ರಸ್ತೆಗೆ ಬಿದ್ದು,ಸಮೀಪದ ಮನೆಗಳಿಗೂ ಹಾನಿಯುಂಟಾಗಿದೆ.
ಮನೆಯ ಸಮೀಪದ ಗುಡ್ಡವು ಬಹಳಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದು,ಯಾವುದೇ ತಡೆಗೋಡೆಯಾಗಲಿ ಇಲ್ಲ.ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಂತೂ ಗುಡ್ಡ ಕುಸಿತವಾಗುತ್ತಿದ್ದು,ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ವಾಗಲಿಲ್ಲ.ಗುಡ್ಡ ಕುಸಿತ ಉಂಟಾದ ಪರಿಣಾಮ ಮನೆಯಲ್ಲಿ ಇರುವಂತಿಲ್ಲ.
ಬಾಡಿಗೆ ಮನೆಯಲ್ಲಿ ಕುಳಿತುಕೊಳ್ಳುವಂತೆ ಆಗಿದೆ.ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಜನರ ಸಮಸ್ಯೆಗೆ ಸ್ಪಂದಿಸಿ,ಗುಡ್ಡದ ಅಂಚಿಗೆ ಶಾಶ್ವತವಾದ ತಡೆಗೋಡೆಯನ್ನು ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
PublicNext
12/07/2022 10:01 pm