ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೊಳಚಿ ಕಂಬಳ ಕಟ್ಟದಂಗಡಿ ಬಳಿಯ ಶಾಂಭವಿ ನದಿಗೆ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ರಾತ್ರೋರಾತ್ರಿ ಬಿಡುವುದರಿಂದ ಲಕ್ಷಾಂತರ ರೂ ಮೌಲ್ಯದ ಮೀನುಗಳು ನಾಶವಾಗಿದೆ ಎಂದು ಮೀನು ಸಾಕಾಣಿಕ ಕೇಂದ್ರದ ಮಾಲೀಕ ಜೀವನ್ ಕೋಟ್ಯಾನ್ ಆರೋಪಿಸಿದ್ದಾರೆ.
ಬಹು ಮಹಡಿ ಕಟ್ಟಡಗಳ ತ್ಯಾಜ್ಯ ನೀರು ಚರಂಡಿ ಮೂಲಕ ನದಿಗೆ ಬಿಡುತ್ತಿರುವುದರಿಂದ ಅನೇಕ ಮೀನಿನ ಸಂತತಿಗಳು ನಾಶವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದರೂ ಇದುವರೆಗೂ ಪರಿಹಾರ ದೊರಕಿಲ್ಲ, ಬಹು ಮಹಡಿ ಕಟ್ಟಡಗಳ ತ್ಯಾಜ್ಯ ನೀರಿನಿಂದ ಪರಿಸರ ದುರ್ವಾಸನೆ ಬೀರುತ್ತಿದ್ದು ರೋಗಗಳ ಭೀತಿ ಎದುರಾಗಿದೆ.
ಕೂಡಲೇ ಮೀನುಗಾರಿಕಾ ಇಲಾಖೆ ಹಾಗೂ ಮುಲ್ಕಿ ನಗರ ಪಂಚಾಯತಿ ಎಚ್ಚೆತ್ತು ನಷ್ಟಕ್ಕೆ ಪರಿಹಾರ ದೊರಕಿಸುವುದರ ಜೊತೆಗೆ ತ್ಯಾಜ್ಯ ನೀರು ಬಿಡುವ ಕಟ್ಟಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
12/07/2022 08:07 pm