ಬಂಟ್ವಾಳ: ಪಂಜಿಕಲ್ಲು ಮುಕ್ಕುಡದಲ್ಲಿ ನಡೆದ ದುರಂತ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇದಕ್ಕೆ ಆಡಳಿತ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.
ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಕಾಲಕ್ಕೆ ದೊರಕಬೇಕಿತ್ತು, ಆದರೆ ಅದನ್ನು ಮಾಡುವಲ್ಲಿ ಆಡಳಿತ ವಿಫಲವಾಯಿತು ಎಂದು ಆರೋಪಿಸಿದರು. ಇಂಥ ಸನ್ನಿವೇಶಗಳು ಆದಾಗ ಜೀವ ಉಳಿಸಲು ಏನೇನು ಮಾಡಬಹುದು ಅಂಥ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಜೀವ ಉಳಿಸಲು ಬೇಕಾದ ಸಕಾಲಕ್ಕೆ ಆಕ್ಸಿಜನ್ ಇರುವ ಆಂಬುಲೆನ್ಸ್, ವೈದ್ಯರ ತಂಡ ಅಲ್ಲಿರಬೇಕಿತ್ತು ಎಂದು ರೈ ಹೇಳಿದರು.
ಘಟನೆಗಳು ಆದಾಗ ನೋಟಿಸ್ ಕೊಡುತ್ತಿದ್ದಾರೆ, ಬದಲಿ ವ್ಯವಸ್ಥೆ ಆಗಬೇಕಲ್ಲ ಎಂದು ಹೇಳಿದ ರೈ, ಮನೆಯಿಂದ ತೆರವುಗೊಳಿಸಿದರೆ ಅವರು ಎಲ್ಲಿಗೆ ಹೋಗಬೇಕು, ಬದಲಿ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿಯೂ ಪಂಚಾಯಿತಿಗಳಿಗಿದೆ ಎಂದರು. ಪಂಜಿಕಲ್ಲಿನಲ್ಲಿ ಉಸಿರುಗಟ್ಟಿದ ಒಬ್ಬ ಪೇಶಂಟ್, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು ಎಂದ ರೈ, ಬಂಟ್ವಾಳದ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಇದೆ ಎಂದಾದರೆ ಯಾಕೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.
ಯಾರ ರಕ್ಷಣೆ ಮಾಡಿದರು?
ಮನೆ ಮಾಲೀಕರು ಅಲ್ಲಿಗೆ ಹೋಗಬಾರದು, ಎಲ್ಲರೂ ಅಲ್ಲಿಗೆ ಹೋಗುತ್ತಾರೆ, ಯಾರನ್ನೂ ಬಿಟ್ಟಿಲ್ಲ ಎಂದಾದ ಮೇಲೆ ರಕ್ಷಣೆ ಮಾಡಿದ್ದು ಯಾರನ್ನು ಎಂದು ಪ್ರಶ್ನಿಸಿದ ರೈ, ನಾವು ಜೀವರಕ್ಷಣೆ ಮಾಡಿದ್ದೇವೆ ಎಂದು ಪಂಚಾಯಿತಿಯ ತಂಡ ಹೇಳುತ್ತಾರೆ, ಅಲ್ಲಿ ಆತಂಕದಲ್ಲಿದ್ದವರನ್ನು ರಕ್ಷಿಸಿದ್ದೇವೆ ಎಂದು ಹೇಳಿದ್ದಾರೆ, ಹೋದವರು ಯಾರು, ರಕ್ಷಣೆ ಮಾಡಿದ್ದು ಯಾರನ್ನು ಎಂದು ರೈ ಪ್ರಶ್ನಿಸಿದರು.
Kshetra Samachara
12/07/2022 02:16 pm