ಮಂಗಳೂರು: ಕಡಲ ತಟ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಹುತೇಕ ಎಲ್ಲರಿಗೂ ಇಷ್ಟನೇ ಬಿಡಿ. ಸುವಿಶಾಲ ಜಲರಾಶಿಯ ಸೊಬಗು ಸವಿಯುತ್ತಾ ಕೂತರೆ ಇಡೀ ಜಗತ್ತನ್ನೇ ಮರೆತು ಹೋಗುತ್ತೇವೆ ಅಲ್ವೇ ಮತ್ತೆ!?
ಅಗಾಧ ಸಮುದ್ರ- ಸಾಗರ ಸಾಮ್ರಾಜ್ಯದ ತೀರ ಕಂಡರೆ ಸಾಕು, ಮನುಷ್ಯರಂತೆಯೇ ಪ್ರಾಣಿ- ಪಕ್ಷಿಗೂ ಅದೇನೋ ಮಜಾ, ಮನಸ್ಸಿಗೆ ಮುದ...ನೀರಾಟವಾಡುವ ತುಡಿತ.
ನೋಡಿ ಅಲ್ಲಿ... ಅದೆಲ್ಲಿಂದ ಬಂತೋ ಜಿಂಕೆಮರಿ...! ಶರಧಿಯ ಮಡಿಲಲ್ಲಿ ಹೇಗೆ ಕುಣಿಕುಣಿದು ಆಗಾಗ ಚಂಗನೇ ಜಿಗಿಯುತ್ತಾ ಆನಂದಾತೀರೇಕದಿಂದ "ಅಲೆ"ದಾಟವಾಡುತ್ತಿದೆ! ಎಷ್ಟೆಂದರೂ ವನ್ಯಜೀವಿ ತಾನೇ? ಈ ಅಂದದ ಸ್ವಚ್ಛಂದ ಪರಿಸರ, ಅರಣ್ಯದಲ್ಲಿ ಹರಿಣಕ್ಕೆ ಎಲ್ಲಿ ಕಾಣಲು ಸಾಧ್ಯ?
ಪ್ರಶಾಂತವಾದ ಕಡಲ ಸುಂದರತೆಯ ವಾತಾವರಣ ಕಂಡಾಕ್ಷಣ ಪ್ರಾಣಿಯೇನು, ನಾವು ಕೂಡ ಆ ಖುಷಿಯ ರೋಮಾಂಚನ, ತನುಮನದ ಹುಮ್ಮಸ್ಸನ್ನು ಹೀಗೆಯೇ ಅನಾವರಣಗೊಳಿಸಿದ್ದೇವೆ ತಾನೇ.
Kshetra Samachara
08/07/2022 07:02 pm