ಉಳ್ಳಾಲ ನಿರಂತರ ಮಳೆಯ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ನೀರು, ರಸ್ತೆಯಲ್ಲೂ ತೊರೆಯಂತೆ ನೀರು ತುಂಬುತ್ತಿದೆ. ಪರಿಣಾಮ ವಾಹನ ಸವಾರರ ಪಾಡು ಹೇಳತೀರದು.
ಉಳ್ಳಾಲದ ಉಚ್ಚಿಲವೂ ಇಂದು ನಿರಂತರ ಮಳೆಯ ಪರಿಣಾಮ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ತೊರೆಯಂತೆ ನೀರು ತುಂಬಿದೆ. ಇದೇ ರಸ್ತೆಯಲ್ಲಿ ಕಾರೊಂದು ಆಗಮಿಸಿ ಮುಂದೆ ಚಲಿಸಲಾಗದೆ ನಿಂತಿದೆ. ಪರಿಣಾಮ ನಾಲ್ವರು ಆ ಕಾರನ್ನು ತಳ್ಳಿಕೊಂಡೇ ಮುಂದಕ್ಕೆ ಚಲಿಸುವ ದೃಶ್ಯ ಕಂಡು ಬಂದಿದೆ.
Kshetra Samachara
05/07/2022 07:50 pm