ಮಂಗಳೂರು : ನಿನ್ನೆಯಿಂದ ಕರಾವಳಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನಗರದ ಹೊಯಿಗೆ ಬಜಾರ್ ನಲ್ಲಿರುವ ಬಾವಾ ವುಡ್ ಇಂಡಸ್ಟ್ರೀಸ್ ಎಂಬ ಮರದ ಮಿಲ್ ಕುಸಿದು ಅಪಾರ ನಷ್ಟ ಸಂಭವಿಸಿದೆ.
ಮಂಜೇಶ್ವರದ ಕೆ.ಅಬ್ದುಲ್ಲಾ ಎಂಬವರಿಗೆ ಸೇರಿರುವ ಬಾವಾ ವುಡ್ ಇಂಡಸ್ಟ್ರೀಸ್ ಈ ಮರದ ಮಿಲ್ ಬುಧವಾರ ಸುರಿದ ಮಳೆಗೆ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಆದರೆ ರಾತ್ರಿ 9ರ ವೇಳೆಗೆ ಈ ಮರದ ಮಿಲ್ ನ ಗೋಡೆ ಸಂಪೂರ್ಣ ಕುಸಿದು ಬಿಟ್ಟಿದೆ. ಪರಿಣಾಮ ಮಿಲ್ ನೊಳಗಿದ್ದ ಮರಗಳು ಹಾಗೂ ಯಂತ್ರಗಳು ಹಾನಿಗೊಳಗಾಗಿದೆ. ಪರಿಣಾಮ ಅಪಾರ ನಾಶ - ನಷ್ಟ ಉಂಟಾಗಿದೆ ಎಂದು ಹೇಳಿದರು.
Kshetra Samachara
19/05/2022 07:48 pm