ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಅತಿಕಾರಿಬೆಟ್ಟು, ಪಡುಪಣಂಬೂರು ಪರಿಸರದಲ್ಲಿ ಸೋಮವಾರ ಸಂಜೆ ಏಕಾಏಕಿ ಸುರಿದ ಭಾರಿ ಮಳೆಗೆ ಕೆಲ ಕಡೆ ಕೃತಕ ನೆರೆ ಭೀತಿ ಎದುರಾಗಿದೆ.
ಮುಲ್ಕಿ, ಮೂಡಬಿದಿರೆ ರಾಜ್ಯ ಹೆದ್ದಾರಿಯ ಕಾರ್ನಾಡು, ಕೆಂಚನಕೆರೆ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಉಂಟಾಗಿದ್ದು ಸ್ಥಳೀಯರಿಗೆ, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಆಂಜನೇಯ ಗುಡಿ ಬಳಿ ಸುರಿದ ಮಳೆಗೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಉಳಿದಂತೆ ಮುಲ್ಕಿ ಬಸ್ ನಿಲ್ದಾಣ, ಹಳೆಯಂಗಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿ ಚತುಷ್ಪಥ ಸರ್ವಿಸ್ ರಸ್ತೆ ಅಪೂರ್ಣ ಕಾಮಗಾರಿಯಿಂದ ಭಾರಿ ಮಳೆಗೆ ಕೃತಕ ನೆರೆ ಉಂಟಾಗಿದೆ. ಭಾರಿ ಮಳೆ ಸಿಡಿಲಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
Kshetra Samachara
16/05/2022 07:22 pm