ಬ್ರಹ್ಮಾವರ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 18 ಕುಟುಂಬಗಳಿಗೆ ಇವತ್ತು ಪರಿಹಾರ ಧನ ವಿತರಿಸಲಾಯಿತು. ಒಟ್ಟು 5,43,100 ರೂ.ಮೊತ್ತದ ಪರಿಹಾರ ಧನದ ಚೆಕ್ ನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.
ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಉಷಾ ಅವರಿಗೆ ರೂ. 95,100/- ರೋಹಿಣಿ ರೂ. 95,100/-, ಭೋಜು ಸಾವಂತ್ ರೂ. 95,100/- ಜಯಪ್ರಕಾಶ್ ರೂ. 95,100/-, ಗಿರೀಜಾ ರೂ. 5,200/-, ಸರಸ್ವತಿ ರೂ. 5,200/-, ಲೀಲಾವತಿ ರೂ. 5,200/- ಯಶೋದಾ ರೂ. 5, 200/-, ಕಾವೇರಿ ರೂ. 5,200/-, ಶೇಖರ ಸೇರ್ವೇಗಾರ್ ರೂ. 5,200/-, ನಾರಾಯಣ ಸಾವಂತ್ ರೂ 5,200/-, ಜ್ಯೋತಿ ರೂ. 5,200/-, ಸಂತೋಷ ರಾವ್ ರೂ. 5,200/-, ಶಂಕರ ಸೇರ್ವೇಗಾರ್ ರೂ. 5,200/-, ರಾಘವೇಂದ್ರ ರೂ. 5,200/-, ಜಗದೀಶ ಎನ್. ಶೆಟ್ಟಿ ರೂ. 5,200/-, ಉದಯ ರೂ. 5,200/-, 38 ಕಳ್ತೂರು ಗ್ರಾಮದ ಅನ್ನಪೂರ್ಣ ರೂ. 95,100/- ಸೇರಿದಂತೆ ಒಟ್ಟು ರೂ. 5,43,100/- ಮೊತ್ತದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.ಈ ಸಂದರ್ಭ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
27/04/2022 05:15 pm