ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ದಟ್ಟ ಕಾನನದ ಮಧ್ಯೆ ಪುರಾಣ ಪ್ರಸಿದ್ಧ ತಾಣ ಧನುಷ್ ತೀರ್ಥ!

ಉಡುಪಿ : ಉಡುಪಿಯಿಂದ 14 ಕಿಮೀ ದೂರದ ಕಾಡು ಪ್ರದೇಶದಲ್ಲಿರುವ ಸುಂದರ ತಾಣವೇ ಧನುಷ್ ತೀರ್ಥ.

ಬಂಟಕಲ್ಲು ರಸ್ತೆಯಿಂದ ಮುಡುಂಬ ಅಜ್ಜೀಲಕಾಡು ರಸ್ತೆಯ ಬಲಕ್ಕೆ ಸಾಗಿದರೆ ಕಾಡುಗಳ ಮದ್ಯೆ ಇರುವ ಧನುಷ್ ತೀರ್ಥವನ್ನು ನಾವು ತಲುಪಬಹುದು.

ಈ ಸ್ಥಳವನ್ನು ತಲುಪಲು 100 ಮೆಟ್ಟಿಲುಗಳನ್ನು ಹತ್ತಬೇಕು. ಈ ಹಿಂದೆ ಮಧ್ವಾಚಾರ್ಯರು ಕುಂಜಾರು ಗಿರಿಗೆ ಬಂದು 5 ತೀರ್ಥವನ್ನು ಸ್ಥಾಪನೆ ಮಾಡಿದ್ದು, ಅದರಲ್ಲಿ ಧನುಷ್ ತೀರ್ಥವು ಒಂದಾಗಿದೆ.

ಹಾಗೇ ಇನ್ನೊಂದು ಪುರಾಣದ ಪ್ರಕಾರ ಪರಶುರಾಮರು ಈ 5 ತೀರ್ಥಗಳನ್ನು ಸ್ಥಾಪಿಸಿದ್ದು ಎನ್ನುವ ಉಲ್ಲೇಖಗಳಿವೆ.

ಒಟ್ಟಾರೆ ಈ ಧನುಷ್ ತೀರ್ಥದಲ್ಲಿ ಬೇಸಿಗೆ ಕಾಲದಲ್ಲೂ ನೀರು ಕಾಣಸಿಗುವುದು ಒಂದು ಅಚ್ಚರಿ ಸಂಗತಿಯಾಗಿದೆ.

Edited By : Nagesh Gaonkar
PublicNext

PublicNext

26/03/2022 05:05 pm

Cinque Terre

48.31 K

Cinque Terre

0