ಹಿರಿಯಡ್ಕ: ಇತ್ತೀಚೆಗೆ ಹಿರಿಯಡ್ಕದಲ್ಲಿ ಗಿಡುಗವೊಂದಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಅದರ ಬಲ ರೆಕ್ಕೆ ತುಂಡಾಗಿತ್ತು. ಗಿಡುಗಕ್ಕೆ ಹಿರಿಯಡ್ಕ ಪಶು ಪಾಲನಾ ಸೇವಾ ಕೇಂದ್ರದಲ್ಲಿ ಪ್ರಾಧಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಉಡುಪಿ ಜಿಲ್ಲಾ ಪಶು ಪಾಲನಾ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿ ಆಗದೆ ಗಿಡುಗ ಸಾವನ್ನಪ್ಪಿದೆ. ಪ್ರಾಣಿದಯಾ ಸಂಘದ ಸದಸ್ಯ ವಾಸುದೇವ ಬನ್ನಂಜೆ ಮತ್ತು ಆ ಊರಿನ ಪರಿಸರದ ಜನರ ಸಹಕಾರದಿಂದ ಗಿಡುಗವನ್ನು ಹಿರಿಯಡ್ಕದಲ್ಲಿ ಧಫನ ಮಾಡಲಾಯಿತು.
Kshetra Samachara
02/03/2022 03:08 pm