ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಂತಾಡಿ ಕೊಂಬಿಲದ ಕಿನ್ನಿಗದ್ದೆ ಎಂಬಲ್ಲಿ ಸಾಕುನಾಯಿ ಮೇಲೆ ದಾಳಿ ಮಾಡಿದ ಚಿರತೆ

ಬಂಟ್ವಾಳ: ಅನಂತಾಡಿ ಗ್ರಾಮದ ಕೊಂಬಿಲದ ಕಿನ್ನಿ ಗದ್ದೆ ಎಂಬಲ್ಲಿನ ಮನೆಯ ಬಳಿ ಶುಕ್ರವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಮನೆಯ ಸಾಕುನಾಯಿಯ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.

ವೀರಕಂಭ ಕೊಡಾಜೆ ರಸ್ತೆಯಲ್ಲಿ ಸಿಗುವ ಕೊಂಬಿಲ ಎಂಬಲ್ಲಿನ ಆರಕ್ಷಕ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.

ರಾತ್ರಿ 1 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಹಿಂಭಾಗ ನೋಡಿದಾಗ ಚಿರತೆ ನಾಯಿಯನ್ನು ಕಚ್ಚುತ್ತಿರುವ ದೃಶ್ಯ ಕಂಡುಬಂದಿದೆ. ಸುಮಾರು20 ಮೀಟರ್ ದೂರ ನಾಯಿಯನ್ನು ಎಳೆದೊಯ್ಯಲು ಚಿರತೆ ಯತ್ನಿಸಿದ್ದು , ನಾಯಿ ತಪ್ಪಿಸಿಕೊಂಡಿದೆ. ಈ ವೇಳೆ ಮನೆಯ ಎಲ್ಲಾ ಲೈಟ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿರತೆ ಕಾಡಿನಲ್ಲಿ ಮರೆಯಾಗಿದೆ.

Edited By :
Kshetra Samachara

Kshetra Samachara

22/01/2022 03:47 pm

Cinque Terre

2.89 K

Cinque Terre

0

ಸಂಬಂಧಿತ ಸುದ್ದಿ